ಉಳ್ಳಾಲ ನಗರಸಭೆಯ ದುರಾಡಳಿತದ ವಿರುದ್ಧ ಫೆ. 27ರಂದು ಬೃಹತ್ ಪ್ರತಿಭಟನೆ

Prasthutha|

ಮಂಗಳೂರು: ಕಳೆದ ಎರಡು ವರ್ಷಗಳಿಂದ ಉಳ್ಳಾಲ ನಗರ ಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಹಲವಾರು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಮನೆ ತೆರಿಗೆ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಫೆ.27ರಂದು ಸೋಮವಾರ ಬೆಳಗ್ಗೆ 10:30ಕ್ಕೆ ಸರಿಯಾಗಿ ಉಳ್ಳಾಲ ನಗರ ಸಭೆಯ ಮುಂಭಾಗದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಉಳ್ಳಾಲ ನಗರ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.

- Advertisement -


ಹಿಂದೆಯೂ ಭ್ರಷ್ಟಾಚಾರದ ವಿರುದ್ಧ SDPI ಪಕ್ಷವು ಹೋರಾಟವನ್ನು ನಡೆಸಿದ್ದು ನ್ಯಾಯ ಪಾಲನೆ ವಿಷಯದಲ್ಲಿ ಯಾವತ್ತೂ SDPI ಪಕ್ಷವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು SDPI ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾದ A R ಅಬ್ಬಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp