ಕಥುವಾ ಬಾಲಕಿ ಪರ ವಾದಿಸಿದ ವಕೀಲೆ ದೀಪಿಕಾ ಸಿಂಗ್ ವಿರುದ್ಧ ಹಿಂದುತ್ವ ಟ್ರೋಲ್: ಬಂಧನಕ್ಕೆ ಆಗ್ರಹ

Prasthutha|

►► ಟ್ವಿಟ್ಟರ್ ನಲ್ಲಿ ಟ್ರೆಂಡ್ ಆದ #Arrest_Deepika_Rajawat

►► ಹಿಂದೂ ಧರ್ಮದ ಅವಮಾನ ಆರೋಪ

- Advertisement -

ಹೊಸದಿಲ್ಲಿ: 2018ರಲ್ಲಿ ಕಾಶ್ಮೀರಾದ ಕಥುವಾದಲ್ಲಿ ಅತ್ಯಾಚಾರ ಮತ್ತು ಹತ್ಯೆಗೊಳಗಾಗಿದ್ದ 8ರ ಹರೆಯದ ಬಾಲಕಿಯ ಕುಟುಂಬದ ಪರ ವಾದಿಸಿದ್ದ ವಕೀಲೆ ದೀಪಿಕಾ ಸಿಂಗ್ ರಾಜವತ್ ಬಂಧನವನ್ನು ಆಗ್ರಹಿಸಿ  ಹಿಂದುತ್ವಾವಾದಿ ಟ್ರೋಲ್ ಬ್ರಿಗೇಡ್ ಗಳು ಟ್ವೀಟ್ ಗಳನ್ನು ಹರಿಸುತ್ತಿವೆ.

#Arrest_Deepika_Rajawat ಇಂದಿನ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದ್ದು, ಮಧ್ಯಾಹ್ನ 2.30ರ ವೇಳೆಗೆ  1 ಲಕ್ಷಕ್ಕೂ ಅಧಿಕ ಮಂದಿ ಈ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಗಳನ್ನು ಮಾಡಿದ್ದಾರೆ.

ದೀಪಿಕಾ ಸಿಂಗ್ ರಾಜವಾತ್ ಟ್ವಿಟ್ಟರ್ ನಲ್ಲಿ ಭಾರತದಲ್ಲಿ ಸ್ತ್ರೀಯರ ಮೇಲೆ ಆಗುತ್ತಿರುವ ಅತ್ಯಾಚಾರ ಮತ್ತು ಸ್ತ್ರೀಯರನ್ನು ದೇವತೆಯೆಂದು ಪೂಜಿಸುವುದರ ಹಿಂದಿನ ಕಾಪಟ್ಯವನ್ನು ವಿಡಂಬಿಸುವ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿದ್ದರು.

ವ್ಯಂಗ್ಯಚಿತ್ರವು ಎರಡು ವಿಡಂಬನಾತ್ಮಕ ಚಿತ್ರಕಲೆಯನ್ನು ತೋರಿಸುತ್ತದೆ. ಮೊದಲ ಚಿತ್ರದಲ್ಲಿ ವ್ಯಕ್ತಿಯು ನೆಲದಲ್ಲಿ ಬಿದ್ದಿರುವ ಮಹಿಳೆಯ ಮೇಲೆ ಅತ್ಯಾಚಾರ ದಾಳಿಗೆ ಸಿದ್ಧನಾಗುತ್ತಿದ್ದು, ಚಿತ್ರದ ಮೇಲ್ಭಾಗದಲ್ಲಿ ‘ಇತರ ದಿನಗಳಲ್ಲಿ’ ಎಂದು ಬರೆಯಲಾಗಿದೆ. ಇನ್ನೊಂದು ಚಿತ್ರದಲ್ಲಿ ಅದೇ ವ್ಯಕ್ತಿ ಸೀರೆಯುಟ್ಟ ಭಾರತೀಯ ಸ್ತ್ರೀಯ ಕಾಲನ್ನು ಪೂಜಿಸುತ್ತಿದ್ದು, ಮೇಲ್ಭಾಗದಲ್ಲಿ ‘ನವ ರಾತ್ರಿಯ ದಿನದಂದು’ ಎಂದು ಬರೆಯಲಾಗಿದೆ.

ಚಿತ್ರವು ಹಿಂದೂ ಧರ್ಮ ಮತ್ತು  ಹಿಂದೂ ಮಹಿಳೆಯರನ್ನು ಅಪಮಾನಿಸಿದೆ ಎಂದು ಬಲಪಂಥೀಯ ಟ್ವಿಟ್ಟರ್ ಪಡೆ ಆಕ್ಷೇಪಿಸಿದೆ.

- Advertisement -