ಮತ್ತೆ ಗೃಹ ಬಂಧನ ವಿಧಿಸಲಾಗಿದೆ: ಮೆಹಬೂಬ ಮುಫ್ತಿ ಆರೋಪ

Prasthutha|

ಜಮ್ಮು: ಸೋಮವಾರ ಕಾಶ್ಮೀರ ಹೈದರ್ ಪುರದಲ್ಲಿ ನಡೆದ ಎನ್ ಕೌಂಟರ್ ನಂತರ ಮತ್ತೆ ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನ ಗೃಹ ಬಂಧನದ ಜೊತೆಗೆ ಪಕ್ಷದ ಮುಖಂಡರಾದ ಸುಹೇಲ್ ಬುಹಾರಿ ಮತ್ತು ನಜ್ಮು ಸಾಕಿಬ್ ಎಂಬಾತರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಅಮಾಯಕರನ್ನು ಮಾನವ ಗುರಾಣಿಯಾಗಿ ಬಳಸುವುದು ಮತ್ತು ಕುಟುಂಬಗಳು ಅವರ ಅಂತ್ಯ ಸಂಸ್ಕಾರಕ್ಕೆ ನಿರಾಕರಿಸುತ್ತಿರುವುದು ಕೇಂದ್ರ ಸರ್ಕಾರದ ಅಮಾನವೀಯ ನಡೆಗೆ ಸ್ಪಷ್ಟವಾದ ನಿದರ್ಶನ ಎಂದು ಅವರು ಅರೋಪಿಸಿದರು.

- Advertisement -

ಈ ಮಧ್ಯೆ ನಾಲ್ಕು ಮಂದಿ ಸಾವಿಗೀಡಾದ ಕಾಶ್ಮೀರದ ಹೈದರ್ ಪುರ ಎನ್ ಕೌಂಟರ್ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ. ಮಾತ್ರವಲ್ಲ ತನಿಖೆಯ ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯಪಾಲ ಮನೋಜ್ ಸಿನ್ಹಾ ಟ್ವೀಟ್ ಮೂಲಕ ತಿಳಿಸಿದ್ದಾರೆ.



Join Whatsapp