ಉತ್ತರ ಪ್ರದೇಶ ಬಳಿಕ ಹಿಮಾಚಲದಲ್ಲೂ ಆಹಾರ ಮಳಿಗೆಗಳ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ!

Prasthutha|

ಶಿಮ್ಲಾ: ಪ್ರತಿಯೊಬ್ಬ ಅಂಗಡಿ ಮಾಲಿಕ ಹಾಗೂ ಬೀದಿ ಬದಿಯ ವ್ಯಾಪಾರಿ ತಮ್ಮ ಗುರುತನ್ನು ಪ್ರಕಟಿಸುವುದನ್ನು ಹಿಮಾಚಲ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿದೆ.

- Advertisement -


ಇತ್ತೀಚಿಗಷ್ಟೇ ಉತ್ತರ ಪ್ರದೇಶ ಸರ್ಕಾರವು ಬೀದಿ ಬದಿಯ ವ್ಯಾಪಾರಿಗಳು ತಮ್ಮ ಹೆಸರು ಹಾಗೂ ವ್ಯಾಪಾರದ ಗುರುತನ್ನು ಅಳವಡಿಸುವುದು ಕಡ್ಡಾಯವೆಂದು ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿತ್ತು.


ಆಹಾರ ಔಟ್ ಲೆಟ್ ಗಳಿಗೆ ಸಂಬಂಧಿಸಿದ ಆದೇಶ ಇದಾಗಿದೆ. ಲೋಕೋಪಯೋಗಿ ನಗರ ಇಲಾಖೆ ಹಾಗೂ ಪುರಸಭಾ ನಿಗಮದೊಂದಿಗೆ ಸಭೆ ನಡೆಸಿದ ಬಳಿಕ ಔಟ್ ಲೆಟ್ ಗಳ ವ್ಯಾಪಾರಿಗಳು ತಮ್ಮ ಗುರುತನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ, ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

- Advertisement -


ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಆಹಾರದ ಶುದ್ಧತೆ ಬಗ್ಗೆ ಅನುಮಾನಗಳು ಮೂಡುತ್ತಿರುವುದರ ಬಗ್ಗೆ ಜನತೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಕ್ರಮಾದಿತ್ಯ ಹೇಳಿದ್ದಾರೆ. ಜನರು ಕಳವಳ, ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಉತ್ತರ ಪ್ರದೇಶ ಮಾದರಿಯ ನೀತಿಯನ್ನು ಜಾರಿಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ವಿಕ್ರಮಾದಿತ್ಯ ತಿಳಿಸಿದ್ದಾರೆ.



Join Whatsapp