ನ್ಯೂಯಾರ್ಕ್: ಟ್ವಿಟರ್ ಸಂಸ್ಥೆ ಬಳಿಕ ಫೇಸ್ ಬುಕ್ ಮಾತೃ ಸಂಸ್ಥೆ ಮೇಟಾ ಸಂಸ್ಥೆಯೂ ಕೂಡ ತನ್ನ ಹಲವು ಉದ್ಯೋಗಿಗಳನ್ನು ವಜಾ ಮಾಡಲು ಹೊರಟಿದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್ ಅರ್ಧಕ್ಕರ್ಧ ಉದ್ಯೋಗಸ್ಥರನ್ನು ವಜಾ ಮಾಡಿದ್ದಾರೆ. ಇದೀಗ ಟ್ವಿಟರ್ ಬಳಿಕ ಮೇಟಾ ಕೂಡ ಅಂತಹ ಚಿಂತನೆ ನಡೆಸಿದೆ.
ಮೇಟಾ ದಲ್ಲಿ ಸರಿಸುಮಾರು 87 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಸಹಸ್ರ ಮಂದಿಗಳನ್ನು ವಜಾಗೊಳಿಸಲು ಮೇಟಾ ತೀರ್ಮಾನಿಸಿದೆ ಎನ್ನಲಾಗಿದೆ.
ಹೆಚ್ಚಿನ ಮತ್ತು ಪರಿಣಾಮಕಾರಿಯಾಗಿರುವ ಆದ್ಯತೆಯ ಬೆಳವಣಿಗೆಯ ಕ್ಷೇತ್ರಗಳಲ್ಲಿ ಹೂಡಿಕೆಗೆ ಕಂಪನಿಯು ಗಮನ ನೀಡಲಿದೆ. ಕಂಪೆನಿಯಲ್ಲಿ ಅನಗತ್ಯ ಉದ್ಯೋಗಿಗಳು ಇದ್ದಾರೆ. ಅಗತ್ಯತೆಯ ಮೇರೆಗೆ ಮಾತ್ರ ಜನರನ್ನು ಇಡಲಾಗುವುದು ಎಂದು ಮೆಟಾ ಸಿಇಒ ಮಾರ್ಕ್ ಝಕರ್‌ಬರ್ಗ್ ಹೇಳಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ವಜಾ ಪ್ರಕ್ರಿಯೆಯು ಬುಧವಾರದಿಂದಲೇ ಆರಂಭಿಸಬಹುದು ಎಂದೂ ವರದಿ ಮಾಡಿದೆ.