ದಂಡ ಪಾವತಿಯ ಬೆನ್ನಲ್ಲೇ ಲುಲು ಮಾಲ್​ ಕರೆಂಟ್​ ಬಗ್ಗೆ ಪ್ರಶ್ನಿಸಿದ ಹೆಚ್ಡಿಕೆ

Prasthutha|

ಬೆಂಗಳೂರು: ದಂಡ ಪಾವತಿಯ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರ ಪಾಲುದಾರಿಕೆಯ ಲುಲು ಮಾಲ್​ ಕರೆಂಟ್​ ಬಗ್ಗೆ ಹೆಚ್ಡಿಕೆ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿರುವ ಜೆಡಿಎಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲುಲು ಮಾಲ್​​​ ಕಾಮಗಾರಿ ವೇಳೆ 6 ತಿಂಗಳು ಕರೆಂಟ್ ಬಿಲ್​ ನೀಡಿಲ್ಲ. ಆಗ ಲುಲು ಮಾಲ್​ಗೆ ಬಳಕೆ ಮಾಡಿದ್ದ ವಿದ್ಯುತ್​ಗೆ​​​​​ ದಂಡ ಹಾಕುತ್ತೀರಾ? ಹೈ ಟೆನ್ಷನ್ ವೈರ್ ಅಂಡರ್ ಗ್ರೌಂಡ್​ನಲ್ಲಿ ತೆಗೆದುಕೊಂಡು ಮಾಲ್​ಗೆ ಹೋಗಿದ್ದಾರೆ. ಅದಕ್ಕೆ ಎಷ್ಟು ಹಣ ಕಟ್ಟಿದ್ದೀರಾ? ಸುಜಾತ ಟಾಕೀಸ್ ಮುಂದೆ ಇದ್ದ ಹೈ ಟೆನ್ಷನ್ ವೈರ್ ಹೇಗೆ ಅಂಡರ್ ಗ್ರೌಂಡ್​ನಲ್ಲಿ ತಗೊಂಡು ಹೋದಿರಿ? ಇದು ಜನರಿಗಾಗಿ ಮಾಡಿದ್ರಾ? ನಕಲಿ ಸೊಸೈಟಿಯನ್ನು ಅಸಲಿ ಮಾಡಿಕೊಳ್ಳೋರು‌ ಇವರು ಎಂದು ಕಿಡಿಗಾರಿದ್ದಾರೆ.

- Advertisement -

ಅಲ್ಲದೆ, ಡಿಕೆ ಶಿವಕುಮಾರ್ ಪಾಲುದಾರಿಕೆಯ ಲುಲು ಮಾಲ್​ ಮೇಲೆ ಮತ್ತಷ್ಟು ಆರೋಪಗಳನ್ನು ಮಾಡಿದ್ದಾರೆ. 24 ಎಕರೆ ಖರಾಬು ಭೂಮಿಯನ್ನು ಕಬಳಿಸಲಾಗಿದೆ 1934ರ ಭೂಮಿಯ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಲಾಗಿದೆ. ಇವರೆಲ್ಲ ಹೇಗೆಲ್ಲಾ ದಾಖಲೆ ಬದಲಾಯಿಸಿದ್ದಾರೆಂದು ಗೊತ್ತಿದೆ. ಭೂದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ



Join Whatsapp