ಕಿಡ್ನಾಪ್ ಮಾಡಿ 5 ಲಕ್ಷ ಪಡೆದು, ಬಳಿಕ ಕೊಲೆಗೈದು ಕಾಡು ಪ್ರಾಣಿಗಳಿಗೆ ತಿನ್ನಲೆಸೆದ ಕ್ರೂರಿಗಳು

Prasthutha|

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕಿಡ್ನಾಪ್‌ ಮಾಡಿ ಆತನ ಹೆಂಡ್ತಿಯಿಂದ 5 ಲಕ್ಷ ರೂ. ತರಿಸಿದ ಬಳಿಕ ಕೊಲೆಗೈದ ಮತ್ತು ಶವವನ್ನು ಕಾಡು ಪ್ರಾಣಿಗಳಿಗೆ ಆಹಾರವಾಗಲೆಂದು ಎಸೆದು ಹೋಗಿದ್ದ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಗುರುಸಿದ್ದಪ್ಪ ಮೃತರು.ಸಂಜಯ್ ಹಾಗೂ ಆನಂದ್ ಅವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಪೊಲೀಸರಿಗೆ ಸಿಕ್ಕ ದೇಹದಲ್ಲಿ ತಲೆ ಬುರುಡೆ ಮತ್ತು ಬೆನ್ನೆಲುಬಿನ ಮೂಳೆಗಳು ಮಾತ್ರ ಲಭ್ಯವಾಗಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ದುಷ್ಕೃತ್ಯ ನಡೆದಿದ್ದು,ನಾಲ್ವರು ಕಿರಾತಕರು ತಮ್ಮ ಹೊಸ ವರ್ಷದ ಪಾರ್ಟಿ ಹಾಗೂ ಶೋಕಿಗಾಗಿ ಅಮಾಯಕರಿಂದ ಹಣ ಪಡೆದಿದ್ದೂ ಅಲ್ಲದೇ, ಅವರನ್ನು ಅನ್ಯಾಯವಾಗಿ ಕೊಲೆಗೈದು ಅವರ ಮೃತ ದೇಹವೂ ಸಿಗದಂತೆ ಕಾಡು ಪ್ರಾಣಿಗಳಿಗೆ ಎಸೆದು ವಿಕೃತಿ ಮೆರೆದಿದ್ದಾರೆ.

ಬೆಂಗಳೂರಿನ ಜ್ಞಾನಭಾರತೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜಯ್, ಆನಂದ್, ತಿಮ್ಮ ಮತ್ತು ಹನುಮಂತ ಎಂಬ ನಾಲ್ವರು ಹೊಸ ವರ್ಷದ ಪಾರ್ಟಿಗಾಗಿ ಯಾರನ್ನಾದರೂ ಕಿಡ್ನಾಪ್‌ ಮಾಡಿ ಹಣ ಎಗರಿಸಬೇಕು ಎಂದು ಸ್ಕೆಚ್ ಹಾಕಿದ್ದರು. ಪರಿಚಿತವಿದ್ದ ಗುರುಸಿದ್ದಪ್ಪ ಎಂಬರನ್ನೇ ಡಿ.3ರಂದು ತಾವಿದ್ದ ಸ್ಥಳಕ್ಕೆ ಕರೆಸಿಕೊಂಡು ಹಿಡಿದುಕೊಂಡಿದ್ದಾರೆ. ಬಳಿಕ ಆತನ ಪತ್ನಿಗೆ ಕರೆ ಮಾಡಿಸಿ 5 ಲಕ್ಷ ರೂ. ತರಲು ಹೇಳಿ ಹಣವನ್ನು ಪಡೆದಿದ್ದಾರೆ. ಆದರೆ ಹಣ ಪಡೆದ ಬಳಿಕವೂ ಗುರುಸಿದ್ದಪ್ಪರನ್ನು ಬಿಟ್ಟು ಕಳುಹಿಸದೇ ಕಾರಿನಲ್ಲಿ ಕೂಡಿಸಿಕೊಂಡು ಮದ್ಯ ಸೇವನೆ ಮಾಡುತ್ತಾ ಮಂಚಿನಬೆಲೆ ಡ್ಯಾಮ್‌ ಬಳಿಗೆ ಹೋಗಿದ್ದಾರೆ. ಅಲ್ಲಿಯ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದ ಗ್ಯಾಂಗ್, ಡಿಸೆಂಬರ್ 30ರ ರಾತ್ರಿ ಪಾರ್ಟಿ ಮಾಡಿ ಗುರು ಸಿದ್ದಪ್ಪನನ್ನು ಬಿಟ್ಟು ಕಳಿಸುವುದಾಗಿ ಹೇಳಿದ್ದರು. ಆದ್ರೆ ಇವನನ್ನು ಬಿಟ್ರೆ ಪೊಲೀಸರಿಗೆ ಹೇಳುತ್ತಾನೆ ಎಂದು ನಿರ್ದಯವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ, ಮೃತ ದೇಹವನ್ನು ಕಾಡಿನಲ್ಲಿಯೇ ಬೀಸಾಡಿ, ಅಲ್ಲಿಂದ ಹೊಸ ವರ್ಷಕ್ಕಾಗಿ ಗೋವಾಕ್ಕೆ ತೆರಳಿ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ.

- Advertisement -

ಹುಬ್ಬಳ್ಳಿಯಿಂದ ಬಂದು ಜೀವನ ಕಟ್ಟಿಕೊಂಡು, ಬೆಂಗಳೂರಿನ ಕಿರಾತಕ ಹುಡುಗರಿಗೆ ಪಾರ್ಟಿಗಾಗಿ ಹಣವನ್ನು ಕೊಟ್ಟ ಗುರುಸಿದ್ದಪ್ಪ ಅನಾಥ ಹೆಣವಾಗಿ ಕಾಡಿನಲ್ಲಿ ಬಿದ್ದಿರುವಾಗ ಇದ್ಯಾವುದೂ ಗೊತ್ತಿಲ್ಲದ ಗುರುಸಿದ್ದಪ್ಪರ ಪತ್ನಿ ತನ್ನ ಗಂಡ ಹಣ ಪಡೆದುಕೊಂಡು ಹೋದವರು ಮನೆಗೆ ವಾಪಸ್ಸು ಬಂದಿಲ್ಲ ಎಂದು ಮಿಸ್ಸಿಂಗ್ ಕೇಸ್ ನೀಡಿದ್ದಾರೆ. ಮಿಸ್ಸಿಂಗ್ ಕೇಸ್ ವಿಚಾರಣೆ ಮಾಡುವಾಗ ಪೊಲೀಸರಿಗೆ ಮಂಚಿನ ಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಮೃತ ದೇಹ ಪತ್ತೆಯಾಗಿದೆ. ಸತತ ಎರಡು ದಿನ ಹುಡುಕಾಟದ ಬಳಿಕ ಮೃತ ದೇಹ ಪತ್ತೆಯಾಗಿದ್ದು, ಕಾಡು ಪ್ರಾಣಿಗಳು ಗುರುಸಿದ್ದಪ್ಪನ ದೇಹವನ್ನು ಎಳೆದುಕೊಂಡು ಹೋಗಿ ತಿಂದಿದ್ದು, ತಲೆ ಬುರುಡೆ ಮತ್ತು ಬೆನ್ನೆಲುಬಿನ ಮೂಳೆಗಳು ಮಾತ್ರ ಲಭ್ಯವಾಗಿವೆ.

ಗುರುಸಿದ್ದಪ್ಪನ ಅಳಿದುಳಿದ ಮೃತದೇಹದ ಭಾಗಗಳನ್ನು ಸಂಗ್ರಹಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುಸಿದ್ದಪ್ಪ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.

ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಈ ಆರೋಪಿಗಳು ಗುರುಸಿದ್ದಪ್ಪನ ಕೊಲೆಗೂ ಮುನ್ನ ಬಿಹಾರದಿಂದ ಬಂದು ಕಾರ್ಪೆಂಟರ್ ಮತ್ತು ಪೇಂಟಿಂಗ್ ಕೆಲಸದ ಮೇಸ್ತ್ರಿಯಾಗಿದ್ದ ಸಂಜಯ್ ಪಂಡಿತ್ ಅವರನ್ನು ಕಿಡ್ನಾಪ್‌ ಮಾಡಲು ಯೋಜಿಸಿದ್ದರು. ಆದರೆ, ಆತ ಬೆಂಗಳೂರು ಬಿಟ್ಟು ಹೊರಗೆ ಹೋಗಿದ್ದು, ತನ್ನ ಬದಲು ಕಾರ್ಮಿಕನೊಬ್ಬನ್ನು ಕಳಿಸಿದ್ದನು. ಆದರೆ, ಹಣ ಕೊಡದೇ ಸಂಜಯ್ ಯಾಮಾರಿಸಿದ್ದಾಗ ತಾನು ಕಳಿಸಿದ್ದ ಕಾರ್ಮಿಕ ಕಿಶನ್‌ಗೆ ಚಾಕು ಬೀಸಿ ಕೊಲೆಗೆ ಯತ್ನಿಸಿದ್ದರು. ಆದರೂ, ಕಿಶನ್ ಓಡಿ ಹೋಗಿದ್ದನು ಎಂಬುದೂ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.



Join Whatsapp