ಶೀಲ ಶಂಕಿಸಿ ಹೆಂಡತಿಯನ್ನೇ ಕೊಂದ ಗಂಡ; ಬಳಿಕ ತಾನೂ ಆತ್ಮಹತ್ಯೆ !

Prasthutha|

ವಿಜಯಪುರ: ಪತ್ನಿಯ ಶೀಲ ಶಂಕಿಸಿ ಹೆಂಡತಿಯನ್ನು ಕತ್ತು ಹಿಸುಕಿ ಗಂಡನೇ ಕ್ರೂರವಾಗಿ ಹತ್ಯೆಗೈದು, ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

- Advertisement -

ಹನುಮವ್ವ (38) ಪತಿಯಿಂದ ಕೊಲೆಗೀಡಾದ ಪತ್ನಿಯಾಗಿದ್ದು, ಕೊಲೆ ಮಾಡಿ ಆತ್ಮಹತ್ಯೆ ಶರಣಾದ ವ್ಯಕ್ತಿಯನ್ನು ಶಿವಪ್ಪ ಮನಗೂಳಿ (45)  ಎಂದು ಗುರುತಿಸಲಾಗಿದೆ.

ಗ್ರಾಮದ ಹೊರ ಭಾಗದ ಜಮೀನಲ್ಲಿರುವ ಶೆಡ್‍ ಗೆ ಗಂಡನೇ ಪತ್ನಿಯನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ನಂತರ ಕೊಲೆ ಮಾಡಿದ್ದಾನೆ. ಪತ್ನಿಯ ಹತ್ಯೆಗೈದ ಬಳಿಕ ಹೆದರಿ ತಾನು ಕೂಡ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

ಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp