ಕೋವಿಡ್ ನಡುವೆಯೇ ಮಲೇರಿಯಾ ಆತಂಕ : ರಾಜ್ಯದ ಒಟ್ಟು ಪ್ರಕರಣಗಳಲ್ಲಿ 80 ಶೇಕಡಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲು !

Prasthutha|

ಮಂಗಳೂರು: ರಾಜ್ಯಾದ್ಯಂತ 1800-1900 ಮಲೇರಿಯಾ ಪ್ರಕರಣಗಳು ಕಂಡು ಬಂದರೆ, ಅದರಲ್ಲಿ ಶೇ.80 ಪ್ರತಿಶತ ಪ್ರಕರಣಗಳು ದ.ಕ.ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಆದ್ದರಿಂದ ಜನತೆ ಮಲೇರಿಯಾ ಸಾಂಕ್ರಾಮಿಕ ರೋಗದ ಬಗ್ಗೆ ಅತೀಹೆಚ್ಚು ಜಾಗರೂಕರಾಗಿರಬೇಕು ದ‌.ಕ.ಜಿಪಂ ಸಿಇಒ ಡಾ.ಕುಮಾರ್ ಹೇಳಿದ್ದಾರೆ.‌

- Advertisement -

ಮಲೇರಿಯಾ ನಿಯಂತ್ರಣ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2020ರಲ್ಲಿ ರಾಜ್ಯದಲ್ಲಿ 1900 ಮಲೇರಿಯಾ ಪ್ರಕರಣಗಳು ಕಂಡು ಬಂದರೆ, ದ.ಕ.ಜಿಲ್ಲೆಯೊಂದರಲ್ಲಿ 1300 ಪ್ರಕರಣಗಳು ಕಂಡು ಬಂದಿವೆ. ಆದ್ದರಿಂದ ಈ ಬಗ್ಗೆ ಜನರಿಗೆ ಮಲೇರಿಯಾ ಬಗ್ಗೆ ಅರಿವು, ಜಾಗೃತಿ ಅವಶ್ಯಕ ಎಂದು ಹೇಳಿದರು.

ಬಹಳ ಮುಖ್ಯವಾಗಿ ಮಲೇರಿಯಾ ರೋಗದ ಬಗ್ಗೆ ಕಾಳಜಿ ಅಗತ್ಯ. ಮಲೇರಿಯಾ ಹೋಗಲಾಡಿಸಲು ಎಷ್ಟೇ ಮಾಸಾಚರಣೆ, ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಯಾವುದೇ ಫಲವಿಲ್ಲ. ಮುಖ್ಯವಾಗಿ ಎಲ್ಲರಲ್ಲೂ ಸ್ವಚ್ಚತೆಯ ಅರಿವು ಮೂಡಬೇಕು‌. ಎಲ್ಲೆಡೆ ಸ್ವಚ್ಚತೆ ಕಾಪಾಡಿಕೊಂಡಲ್ಲಿ ಮಾತ್ರ ಮಲೇರಿಯಾ ನಿರ್ಮೂಲನೆ ಸಾಧ್ಯ ಎಂದವರು ಈ ವೇಳೆ ಹೇಳಿದ್ದಾರೆ.



Join Whatsapp