ದೇಶವನ್ನು ಮತ್ತಷ್ಟು ಅಸ್ಥಿರತೆಗೆ ತಳ್ಳಲು ಅವಕಾಶ ನೀಡುವುದಿಲ್ಲ: ಅಫ್ಘಾನ್ ಅಧ್ಯಕ್ಷ ಮುಹಮ್ಮದ್ ಘನಿ

Prasthutha|

ಕಾಬೂಲ್: ದೇಶ ಗಂಭೀರ ಸ್ವರೂಪದ ಅಸ್ಥಿರತೆಯನ್ನು ಎದುರಿಸುತ್ತಿದ್ದು, ಇದನ್ನು ಹೋಗಲಾಡಿಸಿ ಸ್ಥಿರತೆ ಕಾಪಾಡುವುದು ತನ್ನ ಸರ್ಕಾರದ ಆದ್ಯತೆಯಾಗಿದೆ ಎಂದು ಅಫ್ಘಾನಿಸ್ತಾನ ಅಧ್ಯಕ್ಷ ಮುಹಮ್ಮದ್ ಘನಿ ಹೇಳಿದ್ದಾರೆ.

- Advertisement -

ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಮತ್ತಷ್ಟು ಅಸ್ಥಿರತೆ, ಹಿಂಸೆ ಮತ್ತು ಜನರ ಸ್ಥಳಾಂತರವನ್ನು ತಡೆಯಲು ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. ದೇಶದಲ್ಲಿ ತಾಲಿಬಾನ್ ಬಂಡುಕೋರರ ಹಿಡಿತ ಮೇಲುಗೈ ಸಾಧಿಸುತ್ತಿದ್ದಂತೆ ಅಫ್ಘಾನಿಸ್ತಾನ ಅಧ್ಯಕ್ಷ ಮುಹಮ್ಮದ್ ಘನಿ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಅಮೆರಿಕ ಸೇನೆ ದೇಶವನ್ನು ತೊರೆಯುತ್ತಿದ್ದಂತೆ ತಾಲಿಬಾನ್ ಪಡೆಗಳು ದೇಶದ ಒಂದೊಂದೇ ಭೂ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದ್ದವು. ನಿನ್ನೆಯಷ್ಟೇ ಕಾಬೂಲ್ ನಗರವನ್ನು ಕೈವಶಪಡೆದುಕೊಂಡಿರುವ ತಾಲಿಬಾನ್ ಇಂದು ರಾಜಧಾನಿ ಕಾಬೂಲ್ ಕಡೆಗೆ ಹೆಜ್ಜೆ ಇಟ್ಟಿದೆ. ಕಂದಾಹಾರ್ ಆಕಾಶವಾಣಿ ಕೇಂದ್ರವನ್ನು ಈಗಾಗಲೇ ವಶಕ್ಕೆ ಪಡೆದಿರುವ ತಾಲಿಬಾನ್ ಅದರ ಹೆಸರನ್ನು ವಾಯ್ಸ್ ಆಫ್ ಷರಿಯಾ ಎಂದು ಬದಲಿಸಿದೆ.

- Advertisement -

ದೇಶವನ್ನು ಉದ್ದೇಶಿಸಿ ಮಾತನಾಡಿದ ಘನಿ, “ದೇಶದಲ್ಲಿ ಮತ್ತಷ್ಟು ಅವ್ಯವಸ್ಥೆಯಾಗದಂತೆ ತಡೆಗಟ್ಟುವುದು ನನ್ನ ಮೊದಲ ಆದ್ಯತೆಯಾಗಿದೆ. ರಾಜಕೀಯ ನಾಯಕರು, ಅಂತಾರಾಷ್ಟ್ರೀಯ ಸಮುದಾಯ ಮತ್ತು ಪ್ರಮುಖ ಸರ್ಕಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆಗಳು ನಡೆಯುತ್ತಿವೆ ಎಂದು ಘನಿ ಹೇಳಿದರು.

  ಅಫ್ಘನ್ನರ ಮೇಲೆ “ಹೇರಿದ ಯುದ್ಧ” ವನ್ನು ಮತ್ತಷ್ಟು ಮುಂದುವರಿಸಲು, ಮತ್ತಷ್ಟು ಹತ್ಯೆಗಳು ನಡೆಯಲು ಅವಕಾಶ ನೀಡುವುದಿಲ್ಲ.   ಸಾರ್ವಜನಿಕ ಆಸ್ತಿಯ ನಾಶ ಮತ್ತು ನಿರಂತರ ಅಸ್ಥಿರತೆಯನ್ನು ಮುಂದುವರಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.



Join Whatsapp