ಕಾಬೂಲ್: ಅಫ್ಘಾನಿಸ್ತಾನದ ಮಾನವೀಯ ಬಿಕ್ಕಟ್ಟನ್ನು ತಡೆಗಟ್ಟಲು ಪಾಕಿಸ್ತಾನಿ ಮಾನವಶಕ್ತಿಯನ್ನು ಕಳುಹಿಸಲು ಪಾಕಿಸ್ತಾನ ಬದ್ಧವಾಗಿದೆ ಎಂಬ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಅಧ್ಯಕ್ಷರು ಕಾಬೂಲ್ ನಲ್ಲಿರುವ ತಾಲಿಬಾನ್ ಅಧಿಕಾರಿಗಳಿಗೆ ವಿಶ್ವವಿದ್ಯಾನಿಲಯ ಪದವೀಧರರಾಗಿರುವ ಅಫ್ಘಾನ್ ಯುವಕ ಮತ್ತು ಯುವತಿಯರಿಗೆ ಕೆಲಸದ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ವಿದೇಶದಲ್ಲಿರುವ ಅಫ್ಘಾನ್ ತಜ್ಞರನ್ನು ದೇಶಕ್ಕೆ ಹಿಂದಿರುಗಿಸಲು ಅನುಕೂಲ ಮಾಡಿಕೊಡುವಂತೆ ಕರೆ ನೀಡಿದ್ದರು.
ಶುಕ್ರವಾರ ಅಫ್ಘಾನಿಸ್ತಾನದ ಮೇಲಿನ ಅಪೆಕ್ಸ್ ಕಮಿಟಿಯ ಮೂರನೇ ಸಭೆಯಲ್ಲಿ ಭಾಗವಹಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಮಾನವೀಯ ಬಿಕ್ಕಟ್ಟನ್ನು ತಡೆಗಟ್ಟಲು ಮಾನವಶಕ್ತಿಯನ್ನು ದೇಶಕ್ಕೆ ಕಳುಹಿಸಲು ಸಿದ್ಧ. ವೈದ್ಯಕೀಯ, ಐಟಿ, ಹಣಕಾಸು ಮತ್ತು ಲೆಕ್ಕಪತ್ರದಲ್ಲಿ ಅರ್ಹ ಮತ್ತು ತರಬೇತಿ ಪಡೆದ ರಫ್ತು ಮಾಡುವ ಮೂಲಕ ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟನ್ನು ತಡೆಯಲು ಬದ್ಧವಾಗಿದೆ. ಇದರಿಂದ ಉಭಯ ದೇಶಗಳ ನಡುವಿನ ಸೌಹಾರ್ದ ವಾತಾವರಣ ನಿರ್ಮಿಸಲು ಇದು ಸಹಕಾರಿ ಎಂದು ಹೇಳಿದ್ದರು.
ಅಫ್ಘಾನಿಸ್ತಾನಕ್ಕೆ ವಿದೇಶಿ ಉದ್ಯೋಗಿಗಳ ಅಗತ್ಯವಿಲ್ಲ. ಅಘ್ಘಾನಿಸ್ತಾನದಲ್ಲಿ ದೇಶ ವಿದೇಶದಿಂದ ಉನ್ನತ ಶಿಕ್ಷಣ ಪಡೆದ ಸಾವಿರಾರು ಯುವಕ ಯುವತಿಯರಿದ್ದಾರೆ. ಅಫ್ಘಾನಿಸ್ತಾನಕ್ಕೆ ವಿದೇಶಿ ಉದ್ಯೋಗಿಗಳ ಅಗತ್ಯವಿಲ್ಲ. ವಿದೇಶದ ಮಾನವ ಸಂಪನ್ಮೂಲ ಸಹಕಾರ ಪಡೆದುಕೊಳ್ಳುವ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದಿಲ್ಲಎಂದು ಕರ್ಜೈ ಹೇಳಿದ್ದಾರೆ .
ಅಫ್ಘಾನಿಸ್ತಾನಕ್ಕೆ ಪಾಕ್ ಸಹಾಯ ಬೇಕಾಗಿಲ್ಲ: ಮಾಜಿ ಅಧ್ಯಕ್ಷ ಕರ್ಜೈ ತೀಕ್ಷ್ಣ ಪ್ರತಿಕ್ರಿಯೆ
Prasthutha|