ಅಫ್ಘಾನಿಸ್ತಾನವನ್ನು ಬಾಹ್ಯ ಶಕ್ತಿಗಳಿಂದ ನಿಯಂತ್ರಣ ಸಾಧ್ಯವಿಲ್ಲ: ಎಸ್.ಸಿ.ಒ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

Prasthutha|

ಇಸ್ಲಾಮಾಬಾದ್: ಅಫ್ಘಾನಿಸ್ತಾನವನ್ನು ಬಾಹ್ಯ ಶಕ್ತಿಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಯುದ್ಧಪೀಡಿತ ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದರು.

- Advertisement -

ತಾಲಿಬಾನ್ ಸರ್ಕಾರ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಯೋಜನೆ ರೂಪಿಸಲಿ ಎಂದು ಅವರು ಒತ್ತಾಯಿಸಿದರು.
ತಜಕಿಸ್ತಾನದ ರಾಜಧಾನಿ ದುಶಾನಿಯಲ್ಲಿ ನಡೆಯುತ್ತಿರುವ 21 ನೇ ಶಾಂಘೈ ಸಹಕಾರ ಸಂಘಟನೆಯ ಮುಖ್ಯಸ್ಥರ (SCO-CHS) ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್, ಅಫ್ಘಾನಿಸ್ತಾನದಲ್ಲಿ ಪ್ರಸಕ್ತ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣ ಮಾನವೀಯ ನೆರವನ್ನು ಒದಗಿಸುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಕೋರಿದ್ದಾರೆ.

ಪಾಕಿಸ್ತಾನವು ಶಾಂತಿಯುತ ಮತ್ತು ಸ್ಥಿರ ಅಫ್ಘಾನಿಸ್ತಾನವನ್ನು ಎದುರು ನೋಡುತ್ತಿದೆ. ಪಾಕಿಸ್ತಾನ ತನ್ನ ಬೆಂಬಲವನ್ನು ನೀಡುತ್ತಲೇ ಇರುತ್ತದೆ. ಮಾತ್ರವಲ್ಲ ಅಫ್ಘಾನಿಸ್ತಾನವನ್ನು ಬಾಹ್ಯ ಶಕ್ತಿಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದರು.

- Advertisement -

ಚೈನಾ, ರಷ್ಯಾ,ಕಝಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ, ಭಾರತ ಮತ್ತು ಪಾಕಿಸ್ತಾನ ಒಳಗೊಂಡಂತೆ ಎಂಟು ಸದಸ್ಯ ರಾಷ್ಟ್ರಗಳು 21 ನೇ ಎಸ್.ಸಿ.ಒ ಶೃಂಗಸಭೆಯಲ್ಲಿ ಭಾಗವಹಿಸಿವೆ.

Join Whatsapp