ಮಂಗಳೂರು: ಮುಸ್ಲಿಮ್ ಯುವಕನ ಮೇಲೆ ದುಷ್ಕರ್ಮಿಗಳಿಂದ ತಲವಾರು ದಾಳಿ ನಡೆಸಿರುವ ಘಟನೆ ಅಡ್ಯಾರುಪದವು ಬಳಿ ಶುಕ್ರವಾರ ಸಂಜೆ ನಡೆದಿದೆ.
ಮಾರಣಾಂತಿಕ ದಾಳಿಯಿಂದಾಗಿ ಅಡ್ಯಾರುಪದವು ನಿವಾಸಿ ಅಬ್ದುಲ್ ರಝಾಕ್ (38) ತೀವ್ರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ರಝಾಕ್ ಅವರು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಅಬ್ದುಲ್ ರಝಾಕ್ ಅವರು ಬಿತ್ತ್ ಪಾದೆ ಪಡು ಪರಿಸರದಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಬಜರಂಗ ದಳದ ಜೀವನ್, ಕಿಶೋರ್, ಸುಜಿತ್ , ಗಣೇಶ್ ಹಾಗೂ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಝಾಕ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.