ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್ : ಅಧಿಕಾರದ ಗದ್ದುಗೆ ಏರಿದ SDPI

Prasthutha|

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ತಾಗಿಕೊಂಡಿರುವ ಪ್ರತಿಷ್ಠಿತ ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್’ನಲ್ಲಿ ಎಸ್’ಡಿಪಿಐ ಅಧಿಕಾರಕ್ಕೇರಿದೆ. ಇದೇ ಮೊದಲ ಬಾರಿಗೆ ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್’ನಲ್ಲಿ ಎಸ್’ಡಿಪಿಐ ಬೆಂಬಲಿತರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

- Advertisement -

ಗ್ರಾಮ ಪಂಚಾಯತ್’ನ 2ನೇ ಅವಧಿಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ SDPI ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. SDPI ಬೆಂಬಲಿತ ಅಭ್ಯರ್ಥಿ ಯಾಸೀನ್ ಅರ್ಕುಳ ಅವರು 15 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. SDPI ಬೆಂಬಲಿತ ಅಭ್ಯರ್ಥಿ ಝುಹರಾ 15 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

31 ಸದಸ್ಯ ಬಲದ ಅಡ್ಯಾರ್ ಗ್ರಾಮ ಪಂಚಾಯತ್’ನ ಓರ್ವ ಸದಸ್ಯರು ನಿಧನರಾಗಿದ್ದು ಸದ್ಯ 30 ಮಂದಿ ಸದಸ್ಯರಿದ್ದಾರೆ. ಕಾಂಗ್ರೆಸ್ 13, SDPI 10, ಬಿಜೆಪಿ 6 ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಐವರು ಕಾಂಗ್ರೆಸ್ ಬಂಡಾಯ ಸದಸ್ಯರ ಬೆಂಬಲದಿಂದ ಎಸ್’ಡಿಪಿಐ ಬೆಂಬಲಿತರು ಇದೇ ಮೊದಲ ಬಾರಿಗೆ ಅಡ್ಯಾರ್ ಗ್ರಾಮ ಪಂಚಾಯತ್’ನಲ್ಲಿ ಅಧಿಕಾರಕ್ಕೇರಿದ್ದಾರೆ.

- Advertisement -

ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶ್ರಫ್ ಕೇವಲ 8 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷ ಅಭ್ಯರ್ಥಿ ಖತೀಜಾ ಖುಬ್ರಾ ಕೂಡ 8 ಮತಗಳನ್ನಷ್ಟೇ ಪಡೆದರು. 6 ಮಂದಿ ಬಿಜೆಪಿ ಸದಸ್ಯರು ಚುನಾವಣೆಗೆ ಗೈರುಹಾಜರಾಗಿದ್ದರು.

Join Whatsapp