ವಕೀಲ ಉಮೇಶ್ ಪಾಲ್ ಅಪಹರಣ ಪ್ರಕರಣ: ಅತೀಖ್ ಅಹ್ಮದ್’ಗೆ ಜೀವಾವಧಿ

Prasthutha|

ಲಕ್ನೋ: ವಕೀಲ ಉಮೇಶ್ ಪಾಲ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಂಸದ, ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ಅತೀಖ್ ಅಹಮದ್ ಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಪ್ರಯಾಗ್ ರಾಜ್ ಕೋರ್ಟ್ ಆದೇಶಿಸಿದೆ.

- Advertisement -

ಇದಕ್ಕೂ ಮೊದಲು ಇಂದು ಉಮೇಶ್ ಪಾಲ್ ಕಿಡ್ನಾಪ್ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಮತ್ತು ಮಾಜಿ ಸಂಸದ ಅತೀಖ್ ಅಹಮದ್ ದೋಷಿ ಎಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ವಿಶೇಷ ನ್ಯಾಯಾಲಯವು ತೀರ್ಪು ನೀಡಿತ್ತು.

ಅಹ್ಮದ್ ಮತ್ತು ದಿನೇಶ್ ಪಾಸಿ ಮತ್ತು ಖಾನ್ ಸೌಲತ್ ಹನೀಫ್ ಸೇರಿದಂತೆ ಇತರ ಇಬ್ಬರಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಮತ್ತು ಉಮೇಶ್ ಪಾಲ್ ಅವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಲಾಗಿದೆ.
ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಇತರ ಮೂವರನ್ನು ಪ್ರಯಾಗ್ ರಾಜ್ ನ ಸಂಸದ/ಶಾಸಕ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿತ್ತು. ಫೆಬ್ರವರಿ 24ರಂದು ಪ್ರಯಾಗ್ ರಾಜ್ ನಲ್ಲಿ ಉಮೇಶ್ ಪಾಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.



Join Whatsapp