ನ್ಯೂಯಾರ್ಕ್ : ಬಿಜೆಪಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ
ಅಮೆರಿಕದ ಅತ್ಯಂತ ಜನಪ್ರಿಯ ಸೂಪರ್ ಬೌಲ್ ವಾರ್ಷಿಕ ಫುಟ್ಬಾಲ್ ಟೂರ್ನಿಯ ವೇಳೆ, ಜಾಹೀರಾತೊಂದನ್ನು ಪ್ರದರ್ಶಿಸಲಾಗಿದೆ. 40 ಸೆಕೆಂಡ್ ಗಳ ಜಾಹೀರಾತು ಫುಟ್ಬಾಲ್ ಟೂರ್ನಿಯ ವೇಳೆ ಪ್ರದರ್ಶಿಸಲಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪ್ರದರ್ಶನಗೊಂಡಿರುವ ಈ ಜಾಹೀರಾತು ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) ಅವರ ಅನ್ಯಾಯ ಎಲ್ಲೇ ನಡೆದರೂ ಅದು ಎಲ್ಲೆಡೆ ನ್ಯಾಯಕ್ಕೆ ಅಪಾಯ ಎಂಬ ಹೇಳಿಕೆಯೊಂದಿಗೆ ಆರಂಭವಾಗುತ್ತದೆ.
ಇದರ ಜೊತೆಗೆ ಪ್ರೆಸ್ನೊ ನಗರದ ಮೇಯರ್ ಜೆರ್ರಿ ಡೈಯರ್ ಅವರು, “ಭಾರತದಲ್ಲಿನ ನಮ್ಮ ಸಹೋದರ ಸಹೋದರಿಯರ ಜೊತೆ ನಾವು ಅಚಲವಾಗಿ ನಿಂತಿದ್ದೇವೆ ಎನ್ನುವುದನ್ನು ನೀವು ತಿಳಿಯಬೇಕು ಎನ್ನುವುದು ನಮ್ಮ ಅಪೇಕ್ಷೆ” ಎಂದು ಹೇಳುತ್ತಿರುವುದೂ ಜಾಹೀರಾತಿನಲ್ಲಿದೆ.
ಈ ಜಾಹೀರಾತನ್ನು ಪ್ರೆಸ್ನೊ ಕೌಂಟಿಯಲ್ಲಿ ಮಾತ್ರ ಪ್ರಸಾರ ಮಾಡಲಾಗಿದೆ. ಆದರೆ, ಟ್ವಿಟರ್ ನಲ್ಲಿ ಹಲವು ಮಂದಿ ಬಳಕೆದಾರರು ಇದನ್ನು ಟ್ವೀಟ್ ಮಾಡಿದ್ದಾರೆ. ಗಾಯಕಿ ರಿಹಾನ್ನಾ ಈಗಾಗಲೇ ಭಾರತೀಯ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ ಎನ್ನುವುದನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ.