ಪತಂಜಲಿ ತುಪ್ಪದಲ್ಲಿ ಕಲಬೆರಕೆ: ಅದು ಆರೋಗ್ಯಕ್ಕೆ ಹಾನಿಕರವೆಂದ FSDD

Prasthutha|

ನವದೆಹಲಿ; ಬಾಬಾ ಗುರುದೇವ್ ನಡೆಸಿಕೊಂಡು ಬರುತ್ತಿರುವ ಪತಂಜಲಿ ಕಂಪನಿಯ ತುಪ್ಪದಲ್ಲಿ ಕಲಬೆರಕೆಯಿದೆ ಮತ್ತು ಅದು ಆರೋಗ್ಯಕ್ಕೆ ಹಾನಿಕರ ಎಂದು ಆಹಾರ ಸುರಕ್ಷೆ ಮತ್ತು ಔಷಧೀಯ ಇಲಾಖೆ ( FSDD) ತಿಳಿಸಿದೆ.

- Advertisement -

ಉತ್ತರಖಂಡದ ತೆಹ್ರಿ ಜೆಲ್ಲೆಯ ಅಂಗಡಿಯೊಂದರಲ್ಲಿ ಪತಂಜಲಿಯ ಆಕಳ ತುಪ್ಪದ ಸ್ಯಾಂಪಲನ್ನು ಪಡೆದು ರಾಜ್ಯ ಮತ್ತು ಕೇಂದ್ರೀಯ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅದರಲ್ಲಿ ಕಲಬೆರಕೆ ಇರುವುದು ಪತ್ತೆಯಾಗಿದೆ. ಆದ್ದರಿಂದ ಇದು ಆಹಾರ ಸುರಕ್ಷಾ ಮಾನದಂಡಗಳಿಗೆ ಒಳಪಡುವುದಿಲ್ಲ ಎಂದು FSDD ತಿಳಿಸಿದೆ.

ಈ ಹಿಂದೆ 2021 ರಲ್ಲಿ ಪತಂಜಲಿ ತುಪ್ಪವು ಆರೋಗ್ಯಕ್ಕೆ ಹಾನಿಕರ ಎಂದು FSDD ಪತ್ತೆ ಹಚ್ಚಿತ್ತು. ಆದರೆ ರಾಜ್ಯ ಪ್ರಯೋಗಾಲಯದ ಫಲಿತಾಂಶವನ್ನು ರಾಮದೇವ್ ಕಂಪನಿಯು ನಿರಾಕರಿಸಿತ್ತು. ಇದು ಕಲಬೆರಕೆಯು ಕೇಂದ್ರೀಯ ಪ್ರಯೋಗಾಲಯದಲ್ಲೂ ದೃಢಪಟ್ಟಿದ್ದು ನ್ಯಾಯಾಲಯದಲ್ಲಿ ಪತಂಜಲಿ ವಿರುದ್ಧ ಮೊಕದ್ದಮೆ ದಾಖಲಿಸಿದೆ.

Join Whatsapp