ತಳಮಟ್ಟದಿಂದ “ಸಂಘ”ಟನೆಗೆ ಪ್ರತ್ಯೇಕ ಐಟಿ ಸೆಲ್ ರಚನೆಗೆ ಮುಂದಾದ ಆರೆಸ್ಸೆಸ್

Prasthutha|

ಮದ್ಯಪ್ರದೇಶ, ಜುಲೈ 16: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಅತೀ ಶೀಘ್ರದಲ್ಲೇ ಡಿಜಿಟಲ್ ವೇದಿಕೆಗೆ ಕಾಲಿಡಲಿದ್ದಾರೆ.
ಬಿಜೆಪಿಯಂತೆಯೇ ಆರ್ಎಸ್ಎಸ್ ಕೂಡ ತನ್ನದೇ ಆದ ಪ್ರತ್ಯೇಕ ಐಟಿ ಸೆಲ್ ಸ್ಥಾಪಿಸಲು ಕಾರ್ಯಯೋಜನೆ ರೂಪಿಸುತ್ತಿದೆ. ಪ್ರತಿಯೊಬ್ಬ ಸ್ವಯಂಸೇವಕನು ಸಾಮಾಜಿಕ ಮಾಧ್ಯಮದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಇದರ ಪರಿಣಾಮವಾಗಿ ಮಹತ್ವದ ಹೇಳಿಕೆ ನೀಡುವಂತಾಗಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿನವರೆಗೂ ಸಂಘ ಮತ್ತು ಅದರ ಸ್ವಯಂಸೇವಕರು, ಸಾಮಾಜಿಕ ಮಾಧ್ಯಮದಿಂದ ದೂರವೇ ಉಳಿದಿದ್ದರು. ಆದರೆ ಕೆಲವೇ ತಿಂಗಳುಗಳ ಅಂತರದಲ್ಲಿ ಸ್ವಯಂ ಸೇವಕ ಸಂಘ ಗಮನಾರ್ಹ ಪರಿವರ್ತನೆಗೆ ಒಳಗಾಗಲು ಯೋಜನೆ ಹಾಕಿಕೊಂಡಿದೆ.

- Advertisement -

ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬೇರೆ ಆಯ್ಕೆಗಳಿಲ್ಲದ ಕಾರಣ ತನ್ನ ಶಾಖೆಗಳು ಅಥವಾ ಸೇವಾ ಕಾರ್ಯಗಳ ಮೂಲಕ ಮಾತ್ರ ದೂರದ ಪ್ರದೇಶಗಳಿಗೆ ತನ್ನ ಸಿದ್ಧಾಂತವನ್ನು ತಲುಪಿಸಲು ಕಾರ್ಯಪ್ರವೃತ್ತರಾಗುತ್ತಿತ್ತು. ಆರ್ ಎಸ್ ಎಸ್ ನ ಉನ್ನತ ನಾಯಕರು ಮಾತ್ರ ಇದುವರೆಗೆ ಸಾಮಾಜಿಕ ವೇದಿಕೆಯನ್ನು ಬಳಸುತ್ತಿದ್ದರು. ಇನ್ನು ಮುಂದೆ ಪ್ರತಿ ಸದಸ್ಯರೂ ಸಕ್ರಿಯರಾಗಲಿದ್ದಾರೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ರಾಷ್ಟ್ರೀಯ ಸ್ವಯಂಸೇವಕ ಸಂಘವು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸ್ಥಾನವನ್ನು ಭದ್ರವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರೆಸ್ಸೆಸ್ ಪ್ರತ್ಯೇಕ ಐಟಿ ಸೆಲ್ ಅನ್ನು ರಚಿಸಲಿದೆ. ಅದನ್ನು ಪ್ರಬಲ ಸಂವಹನ ಸಾಧನವಾಗಿ ಪರಿವರ್ತಿಸಲು ಯೋಜಿಸಿದೆ ಎಂದು ಹೇಳಲಾಗುತ್ತಿದೆ.

- Advertisement -

ಮಾತ್ರವಲ್ಲ, ಗಮನಾರ್ಹ ಸಂಖ್ಯೆಯ ಡಿಜಿಟಲ್ ಸ್ವಯಂಸೇವಕರನ್ನು ಅರೆಸ್ಸೆಸ್ ರಚಿಸಲಿದೆ. ಈ ಡಿಜಿಟಲ್ ಸ್ವಯಂಸೇವಕರು ಸಂಘದ ಉಪಕ್ರಮಗಳನ್ನು ತಳಮಟ್ಟದಲ್ಲಿ ಮುನ್ನಡೆಸುತ್ತಾರೆ. ಆರೆಸ್ಸೆಸ್ ಸಭೆಯು ಸಾಂಪ್ರದಾಯದಿಂದ ಡಿಜಿಟಲ್ ಮಟ್ಟಕ್ಕೆ ಬೆಳೆದ ಹಿನ್ನೆಲೆಯಲ್ಲಿ ಶಾಖಾ ಮಟ್ಟದ ಸ್ವಯಂಸೇವಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಲಿದ್ದಾರೆ. ಐಟಿ ಸೆಲ್ ಗಳ ನಿರ್ಮಾಣದ ಮೂಲಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುವುದು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುವುದೆಂದು ಹೇಳಲಾಗುತ್ತಿದೆ.



Join Whatsapp