ವಿವಾದಾತ್ಮಕ ಆದೇಶಗಳನ್ನು ನೀಡಿ ಸುದ್ದಿಯಲ್ಲಿರುವ ಲಕ್ಷದ್ವೀಪದ ಆಡಳಿತಾಧಿಕಾರಿ ಮತ್ತೆ ವಿಚಿತ್ರ ಆದೇಶಗಳನ್ನು ಹೊರಡಿಸಿದ್ದು, ಪ್ರತಿ ಮೀನುಗಾರಿಕೆ ಬೋಟ್ ನಲ್ಲಿ ಸರ್ಕಾರಿ ಅಧಿಕಾರಿ ಇರಬೇಕು ಮತ್ತು ಬೋಟ್ನಲ್ಲಿ ಸಿಸಿಟಿವಿ ಅಳವಡಿಸಲು ಆದೇಶಿಸಲಾಗಿದೆ.
ಹೊಸ ಆದೇಶವು ಲಕ್ಷದ್ವೀಪದಲ್ಲಿ ಜಾರಿಗೆ ತರಲಾಗುತ್ತಿರುವ ಆಡಳಿತ ಸುಧಾರಣೆಗಳ ಭಾಗವಾಗಿದೆ. ಭದ್ರತೆಯನ್ನು ಹೆಚ್ಚಿಸಲು ಪ್ರತಿ ಬೋಟ್ ನಲ್ಲಿ ಅಧಿಕಾರಿಯನ್ನು ನೇಮಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ, ಮೀನುಗಾರಿಕೆಯು ಆದಾಯದ ಮುಖ್ಯ ಮೂಲವಾಗಿರುವ ಲಕ್ಷದ್ವೀಪದ ಜನರಿಗೆ ದ್ರೋಹ ಎಸಗುವ ಹುನ್ನಾರದಿಂದ ಆಡಳಿತಾಧಿಕಾರಿ ಇಂತಹಾ ಆದೇಶಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಝಲ್ ಈ ವಿವಾದಾತ್ಮಕ ಆದೇಶದ ವಿರುದ್ಧ ಪ್ರತಿಭಟಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಗುಜರಾತ್ ನ ಮಾಜಿ ಗೃಹ ಸಚಿವ ಪ್ರಫುಲ್ ಪಟೇಲ್ ಅವರನ್ನು ಲಕ್ಷದ್ವೀಪ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ ನಂತರ, ಹಲವಾರು ಜನ ವಿರೋಧಿ ಕಾನೂನುಗಳನ್ನು ಲಕ್ಷದ್ವೀಪದಲ್ಲಿ ಜಾರಿಗೆ ತರಲಾಗಿದೆ. ಲಕ್ಷದ್ವೀಪದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ತಾತ್ಕಾಲಿಕ ನೌಕರರ ವಜಾ, ಗೋಹತ್ಯೆ ನಿಷೇಧ, ಶಾಲೆಗಳಲ್ಲಿ ಮಾಂಸ ಸೇವನೆ ನಿಷೇಧ ಮತ್ತು ಗೂಂಡಾ ಕಾಯ್ದೆ ಸೇರಿದಂತೆ ಹಲವಾರು ಜನ ವಿರೋಧಿ.