ಗೋರಕ್ಷಣೆ ನೆಪದಲ್ಲಿ ದುಷ್ಕೃತ್ಯ ನಡೆದರೆ ಜಿಲ್ಲಾಡಳಿತವೇ ಹೊಣೆ | ಪಾಪ್ಯುಲರ್ ಫ್ರಂಟ್

Prasthutha|

ಮಂಗಳೂರು : ಬಕ್ರೀದ್ ಹಬ್ಬದ ವೇಳೆ ಗೋರಕ್ಷಣೆಯ ನೆಪದಲ್ಲಿ ದುಷ್ಕೃತ್ಯ ನಡೆದರೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.

- Advertisement -

ಮುಸ್ಲಿಮರ ಪವಿತ್ರ ಧಾರ್ಮಿಕ ಹಬ್ಬವಾದ ಈದುಲ್ ಅಝ್ಹಾ(ಬಕ್ರೀದ್) ಜುಲೈ 21ರಂದು ಆಚರಿಸಲಾಗುತ್ತಿದ್ದು, ಈ ಹಬ್ಬದಂದು ತ್ಯಾಗ, ಬಲಿದಾನದ ಸಂಕೇತವಾಗಿರುವ ಕುರ್ಬಾನಿ ಆಚರಣೆಯು ವಿಶೇಷ ಐತಿಹಾಸಿಕ ಮಹತ್ವವನ್ನು ಹೊಂದಿರುತ್ತದೆ. ಆಯಾ ಧರ್ಮಗಳ ಪ್ರಕಾರ ಧಾರ್ಮಿಕ ಆಚರಣೆಯನ್ನು ನಡೆಸಲು ಸಂವಿಧಾನವೇ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕಾನೂನುಬದ್ಧ ಜಾನುವಾರು ಸಾಗಾಟವನ್ನು ತಡೆದು ದಾಳಿ ನಡೆಸುವುದು, ಕುರ್ಬಾನಿ ಆಚರಣೆಗೆ ತಡೆಯೊಡ್ಡುವಂತಹ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿವೆ. ಇದೀಗ ಸಂಘಪರಿವಾರದ ನಾಯಕರು ಕುರ್ಬಾನಿ ಹೆಸರಿನಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯೊಡ್ಡುವ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಯಾವುದೇ ಅಡಚಣೆ, ಆತಂಕವಿಲ್ಲದೇ ಜಿಲ್ಲಾದ್ಯಂತ ಮುಸ್ಲಿಮರು ಕುರ್ಬಾನಿ ಆಚರಣೆಯನ್ನು ಸುಸೂತ್ರವಾಗಿ ನಡೆಸುವಂತಾಗಲು ಅವಕಾಶ ಕಲ್ಪಿಸಬೇಕೆಂದು ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.



Join Whatsapp