ಮುಡಾದಲ್ಲಿ ಬಿಜೆಪಿ- ಜೆಡಿಎಸ್ ನವರ ಹಗರಣಗಳಿವೆ, ಎಲ್ಲಾ ಪಕ್ಷದ ನಾಯಕರಿಂದಲೂ ಅಡ್ಜಸ್ಟ್ ಮೆಂಟ್ ರಾಜಕೀಯ: ಪ್ರತಾಪ್ ಸಿಂಹ

Prasthutha|

ಹಾಸನ: ಎಲ್ಲಾ ಪಕ್ಷದ ನಾಯಕರೂ ಅಡ್ಜಸ್ಟ್ ಮೆಂಟ್ ರಾಜಕೀಯ ಮಾಡಿಕೊಂಡಿದ್ದಾರೆ. ಮುಡಾದಲ್ಲಿ ಬಿಜೆಪಿ- ಜೆಡಿಎಸ್ ನವರ ಹಗರಣಗಳಿವೆ. ಈ ಬಗ್ಗೆ ಕಾಂಗ್ರೆಸ್ ನವರು ಯಾಕೆ ಮಾತಾಡ್ತಿಲ್ಲ ಎಂದು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಆ ಪಕ್ಷ, ಈ ಪಕ್ಷ ಅಂಥ ಹೇಳುತ್ತಿಲ್ಲ. ಎಲ್ಲಾ ಪಕ್ಷದ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯದಲ್ಲಿ ಇದ್ದಾರೆ. ಇಲ್ಲ ಎಂದರೆ ಮುಡಾದಲ್ಲಿ ಬಿಜೆಪಿ-ಜೆಡಿಎಸ್ ನವರದ್ದು ಇದೆ ಎಂದು ಹೇಳುತ್ತಾರೆ. ಕಾಂಗ್ರೆಸ್ ನವರು ಏಕೆ ಬಿಡುತ್ತಿಲ್ಲ. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ ನವರು ಒಂದು ಸಾಕ್ಷಿನಾದರೂ ಕೊಟ್ಟಿದ್ದಾರಾ? ತನಿಖಾ ಏಜೆನ್ಸಿ ಅವರ ಹತ್ತಿರವೇ ಇದೆ. ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ. 40% ಹಗರಣದ ಬಗ್ಗೆ ತನಿಖೆ ಮಾಡಿಸಿ. ಪಿಎಸ್ ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ. ಪ್ರೀಯಾಂಕ್ ಖರ್ಗೆ ನನ್ನ ಹತ್ರ ದಾಖಲೆ ಇದೆ ಅಂತ ಹೇಳಿಕೆ ಕೊಟ್ಟಿದ್ರಲ್ಲಾ ಕೊಡಪ್ಪ ಇವಾಗ. ಇಟ್ಟುಕೊಂಡು ಏನು ಮಾಡುತ್ತಿದ್ದೀರಾ ನೀವು ಎಂದು ಪ್ರಶ್ನಿಸಿದ್ದಾರೆ.


ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ನನಗೆ ಗೊತ್ತಿಲ್ಲ. ಕಾಂಗ್ರೆಸ್ ನ ತೀರ್ಮಾನ ಏನು ಅಂತ ನನಗೆ ಗೊತ್ತಿಲ್ಲ. ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟರೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯಬೇಕಾಗುತ್ತೆ. ನ್ಯಾಯಾಲಯದ ತೀರ್ಮಾನ ಏನಾಗುತ್ತೋ ಗೊತ್ತಿಲ್ಲ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬಹುದು. ಅದನ್ನು ಬಿಟ್ಟು ಕಾನೂನಿನಲ್ಲಿ ಒತ್ತಾಯ ಮಾಡಲಾಗಲ್ಲ ಎಂದಿದ್ದಾರೆ.



Join Whatsapp