ಲಂಡನ್ ವಿವಿ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡ ಬಾವುಟ ಹಾರಿಸಿದ ಅಧೀಶ್ ಆರ್.ವಾಲಿ

Prasthutha|

ಬೆಂಗಳೂರು: ಲಂಡನ್ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡಿಗ ಅಧಿಶ್ ಆರ್. ವಾಲಿ ಅವರು ಕನ್ನಡ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ.

- Advertisement -


ಈ ಬಗ್ಗೆ ವಾಲಿ ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು, ಲಂಡನ್ ನ ಸಿಟಿ ವಿಶ್ವವಿದ್ಯಾಲಯದ ಬೆಯೆಸ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ವ್ಯಾವಹಾರಿಕ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ. ಇಂಗ್ಲೆಂಡ್ ನ ಲಂಡನ್ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ ಎಂದು ಅವರು ಬರೆದುಕೊಂಡಿದ್ದಾರೆ.


ಅಲ್ಲದೆ, ಇದೇ ವಿಡಿಯೊವನ್ನು ಕರ್ನಾಟಕ ಕಾಂಗ್ರೆಸ್ ಸಹ ಹಂಚಿಕೊಂಡಿದ್ದು, ಎಲ್ಲಾದರೂ ಇರು, ಎಂತಾದರು ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಮಾತಿನಂತೆ ದೂರದ ಲಂಡನ್ ನಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡದ ಬಾವುಟವನ್ನು ಹೆಮ್ಮೆಯಿಂದ ಹಾರಿಸಿದ ಅಧಿಶ್ ವಾಲಿ ಅವರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು. ಶುಭವಾಗಲಿ ನಿಮಗೆ’ ಎಂದು ಹಾರೈಸಿದೆ.

- Advertisement -

Join Whatsapp