ಗಾಂಜಾ ವ್ಯಸನಿ ಮಗನನ್ನು ಖಾರದ ಪುಡಿ ಹಾಕಿ ಥಳಿಸಿದ ತಾಯಿ

Prasthutha|

ಹೈದರಾಬಾದ್: ಗಾಂಜಾ ವ್ಯಸನಿಯಾಗಿದ್ದ ಮಗನನ್ನು ತಾಯಿಯೊಬ್ಬಳು ಕಂಬಕ್ಕೆ ಕಟ್ಟಿ, ಮುಖಕ್ಕೆ ಮೆಣಸಿನ ಪುಡಿ ಹಚ್ಚಿ ಆತನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ದಿನಗೂಲಿ ಕೆಲಸ ಮಾಡುತ್ತಿದ್ದ ರಮಣ ಅವರು ಆರಂಭದಲ್ಲಿ ಮಗನಿಗೆ ಗಾಂಜಾ ಸೇವನೆ ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು. ಕೊನೆಗೆ ಮಗನಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿ, ತಮ್ಮ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಆತನ ಕಣ್ಣಿಗೆ ಮೆಣಸಿನಕಾಯಿಯ ಪುಡಿ ಎರಚಿ ಶಿಕ್ಷಿಸಿದ್ದಾರೆ. ಒಂದು ವರ್ಷದೊಳಗೆ ಗಾಂಜಾ ಸೇವಸಿವುದನ್ನು ಬಿಡುವುದಾಗಿ ಭರವಸೆ ನೀಡಿದ ಬಳಿಕ ಆತನನ್ನು ಬಿಟ್ಟಿದ್ದಾರೆ.

Join Whatsapp