ಮಾಧ್ಯಮ ಕ್ಷೇತ್ರಕ್ಕೆ ಅದಾನಿ ಎಂಟ್ರಿ | ವರದಿ ಏಕಪಕ್ಷೀಯವಾಗಿ ಇರಬಾರದು: ಗೌತಮ್‌ ಅದಾನಿ

Prasthutha|

ಹೊಸದಿಲ್ಲಿ: ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಲವು ಉದ್ದಿಮೆಗಳನ್ನು ಹೊಂದಿರುವ ಅದಾನಿ ಗ್ರೂಪ್‌ ಶೀಘ್ರವೇ ಮಾಧ್ಯಮ ಕ್ಷೇತ್ರ ಪ್ರವೇಶಿಸಲಿದೆ ಎಂದು ತಿಳಿದು ಬಂದಿದೆ.

- Advertisement -

ಹೊಸದಿಲ್ಲಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಗೌತಮ್‌ ಅದಾನಿ, ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಕಟವಾಗುವ ವರದಿಗಳು ಏಕಪಕ್ಷೀಯವಾಗಿ ಇರಬಾರದು. ಎಂದು ಹೇಳಿದ್ದಾರೆ.


ಟಿ.ವಿ, ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿ ಸಂಸ್ಥೆ ಹೂಡಿಕೆ ಮಾಡುವ ಸಾಧ್ಯತೆಗಳಿದ್ದು, ಹೊಸ ಯೋಜನೆಗೆ ಪೂರಕವಾಗಿ ಹಿರಿಯ ಪತ್ರಕರ್ತ ಸಂಜಯ ಪುಗಾಲಿಯಾ ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿಸಲಾಗಿದೆ.



Join Whatsapp