ನವದೆಹಲಿ: ಹಿಂಡನ್ ಬರ್ಗ್ ವರದಿ ಬಿಡುಗಡೆಯಾದ ಬಳಿಕ ಕುಸಿಯಲು ಆರಂಭಿಸಿದ ಉದ್ಯಮಿ ಗೌತಮ್ ಅದಾನಿಯ ಸಾಮ್ರಾಜ್ಯ ಮತ್ತೆ ಮತ್ತೆ ಕುಸಿಯುತ್ತಲೇ ಇದೆ.
ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತ ಎನಿಸಿದ್ದ ಅದಾನಿ ರಾಂಕ್ ಈಗ 30ಕ್ಕೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಪಾತಾಳಕ್ಕೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಅದಾನಿಯವರ ವೈಯಕ್ತಿಕ ಸಂಪತ್ತಿನ ಮೌಲ್ಯದಲ್ಲಿ ಈಗ 6.56 ಲಕ್ಷ ಕೋಟಿ ರೂ. ಕರಗಿದೆ. ಇದರ ಪರಿಣಾಮ ಬಿಲಿಯನೇರ್ ಇಂಡೆಕ್ಸ್’ನಲ್ಲಿಯೂ ಇಳಿದಿದ್ದಾರೆ.
ಅದಾನಿ ಸಮೂಹ ಸೆಪ್ಟೆಂಬರ್ 30ರ ವೇಳೆಗೆ 2.26 ಲಕ್ಷ ಕೋಟಿ ರೂ. ಸಾಲ ಹೊಂದಿದ್ದು, 31,646 ಕೋಟಿ ರೂ. ನಗದನ್ನು ಒಳಗೊಂಡಿತ್ತು. 2023 ಜನವರಿ ಮತ್ತು 2024ರ ಮಾರ್ಚ್ ಅವಧಿಯಲ್ಲಿ 17,166 ಕೋಟಿ ರೂ. ಸಾಲ ಮರುಪಾವತಿಸಬೇಕಾಗಿದೆ.
ಮತ್ತೆ ಕುಸಿದ ಅದಾನಿ ಸಾಮ್ರಾಜ್ಯ: ಶ್ರೀಮಂತರ ಪಟ್ಟಿಯಲ್ಲಿ 30ನೇ ಸ್ಥಾನಕ್ಕಿಳಿದ ಅದಾನಿ
Prasthutha|