ಅದಾನಿ, ಅಂಬಾನಿಗೆ ನನ್ನ ಸಹೋದರನನ್ನು ಖರೀದಿಸಲು ಸಾಧ್ಯವಿಲ್ಲ: ಪ್ರಿಯಾಂಕಾ ಗಾಂಧಿ

Prasthutha|

ಲಕ್ನೊ: ಅದಾನಿ, ಅಂಬಾನಿಗೆ ನನ್ನ ಸಹೋದರನನ್ನು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಸತ್ಯದ ಪರವಾಗಿ ನಿಂತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

- Advertisement -


ಉತ್ತರ ಪ್ರದೇಶಕ್ಕೆ ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ಟಿ ಶರ್ಟ್ ಧರಿಸಿಯೇ ಪಾದಯಾತ್ರೆ ಮಾಡುತ್ತಾರೆ. ಅವರಿಗೆ ಚಳಿಯಾಗುವುದಿಲ್ಲ. ಏಕೆಂದರೆ ಅವರು ಸತ್ಯದ ಕವಚ ಧರಿಸಿದ್ದಾರೆ. ಅವರನ್ನು ಖರೀದಿಸಲು ಅದಾನಿ, ಅಂಬಾನಿಗೆ ಎಂದಿಗೂ ಸಾಧ್ಯವಾಗದು ಎಂದರು.

- Advertisement -

ರಾಹುಲ್ ಗಾಂಧಿ ಸತ್ಯದ ಹಾದಿಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ. ಅಂಬಾನಿ, ಅದಾನಿಯರು ನಾಯಕರನ್ನು ಖರೀದಿಸಬಲ್ಲರು ನಿಜ, ಆದರೆ ನನ್ನ ಸಹೋದರನನ್ನಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

 ಈ ಯಾತ್ರೆಯು ಒಗ್ಗಟ್ಟಿನ ಮಂತ್ರದ್ದಾಗಿದೆ, ಇಡೀ ದೇಶಕ್ಕೆ ಪ್ರೀತಿ ಹಾಗೂ ಪರಸ್ಪರ ಗೌರವ ಹಂಚುವುದಾಗಿದೆ ಮತ್ತು ಸತ್ಯದ ದಾರಿಯನ್ನು ತೆರೆದಿಟ್ಟಿದೆ ಎಂದು ಹೇಳಿದ ಪ್ರಿಯಾಂಕ ಗಾಂಧಿಯವರು ಅದನ್ನು ಜಾಲ ತಾಣಗಳಲ್ಲೂ ಪೋಸ್ಟ್ ಮಾಡಿದ್ದಾರೆ.  

ಇಂದು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ದಿಲ್ಲಿಯಿಂದ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಲೋನಿಯಲ್ಲಿ ಸ್ವಾಗತಿಸಿ ಮಾತನಾಡಿದರು.

“ಅಣ್ಣ, ನಿನ್ನ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. ಈ ಸರಕಾರ ನಿನ್ನ ಇಮೇಜ್ ಹಾಳು ಮಾಡಲು ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ. ಅಂಬಾನಿ, ಅದಾನಿಯರು ನಾಯಕರನ್ನು, ಮಾಧ್ಯಮಗಳನ್ನು, ಪಿಎಸ್’ಯುಗಳನ್ನು ಖರೀದಿಸಿದ್ದಾರೆ. ನನ್ನ ಅಣ್ಣನನ್ನು ಅವರು ಕೊಂಡುಕೊಳ್ಳಲಾಗದು” ಎಂದು ಪ್ರಿಯಾಂಕ ಹೇಳಿದರು.  

ಇನ್ನೂ ಮೂರು ರಾಹುಲ್ ಗಾಂಧಿಯವರ ಯಾತ್ರೆ ಉತ್ತರ ಪ್ರದೇಶದಲ್ಲಿ ನಡೆಯುತ್ತದೆ. ಜನವರಿ 6ರಂದು ಭಾರತ್ ಜೋಡೋ ಯಾತ್ರೆ ಮತ್ತೆ ಹರಿಯಾಣ ಪ್ರವೇಶಿಸುತ್ತದೆ. 11ರಿಂದ 20ನೇ ತಾರೀಕಿನವರೆಗೆ ಭಾರತ್ ಜೋಡೋ ನಡಿಗೆ ಪಂಜಾಬಿನಲ್ಲಿ ನಡೆದು, ತುಸು ಹಿಮಾಚಲ ಪ್ರದೇಶ ಹಾದು, ಕಾಶ್ಮೀರಕ್ಕೆ ಹೋಗಲಿದೆ.

Join Whatsapp