ಬೆಂಗಳೂರು: ಕೇರಳ ಸಿನಿಮಾ ಕ್ಷೇತ್ರದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ, ಹಲವು ಸ್ಟಾರ್ ನಟರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.
ನಟರಾದ ಮುಕೇಶ್, ಮಣಿಯಂಪಿಳ್ಳ ರಾಜು, ಇಡವೆಳ ಬಾಬು ಹಾಗೂ ಜಯಸೂರ್ಯ ತಮಗೆ ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಟಿ ಮಿನು ಮುನೀರ್ ಹೇಳಿದ್ದಾರೆ.
ಫೇಸ್ ಬುಕ್ ನಲ್ಲಿ ಅವರ ಚಿತ್ರಗಳನ್ನು ಹಂಚಿಕೊಂಡು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಮುಕೇಶ್, ಮಣಿಯಂಪಿಳ್ಳ ರಾಜು, ಇಡವೆಳ ಬಾಬು, ಜಯಸೂರ್ಯ, ವಕೀಲ ಚಂದ್ರಶೇಖರನ್, ನಿರ್ಮಾಣ ಸಿಬ್ಬಂದಿ ನೊಬೆಲ್ ಹಾಗೂ ವಿಚು ಅವರಿಂದ ಅನುಭವಿಸಿದ ಸರಣಿ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ನಿಂದನೆಯ ಬಗ್ಗೆ ಬರೆಯುತ್ತಿದ್ದೇನೆ’ ‘2013ರಲ್ಲಿ ನಾನು ಈ ವ್ಯಕ್ತಿಗಳಿಂದ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ನಿಂದನೆಯನ್ನು ಎದುರಿಸಿದ್ದೇನೆ. ನಾನು ಅವರಿಗೆ ಸಹಕಾರ ನೀಡಿ, ಕೆಲಸ ಮುಂದುವರಿಸಿದೆ. ಇದರಿಂದಾಗಿ ನಾನು ಮಲಯಾಳಂ ಸಿನಿಮಾ ತೊರೆದು, ಚೆನ್ನೈಗೆ ಸ್ಥಳಾಂತರಗೊಳ್ಳಬೇಕಾಯಿತು’ ಎಂದು ಬರೆದುಕೊಂಡಿದ್ದಾರೆ.