ರಸ್ತೆ ಅಪಘಾತ: ಖ್ಯಾತ ನಟಿ ವೈಭವಿ ಉಪಾಧ್ಯಾಯ ಮೃತ್ಯು

Prasthutha|

ನವದೆಹಲಿ: ಕಾರು ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ಪರಿಣಾಮಪ್ರವಾಸದಲ್ಲಿದ್ದ ಖ್ಯಾತ ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

- Advertisement -

32 ವಯಸ್ಸಿನ ವೈಭವಿ ಕಿರುತೆರೆ ಫೇಮಸ್ ನಟಿ. ಅಲ್ಲದೇ, ಇತ್ತೀಚೆಗೆ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದರು

ಹಿಂದಿಯ ಜನಪ್ರಿಯ ಕಿರುತೆರೆ ಶೋಗಳಾದ ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಸೇರಿದಂತೆ ಸಾಕಷ್ಟು ಶೋಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ಹಿಂದಿ ಕಿರುತೆರೆಯಲ್ಲಿ ಜಾಸ್ಮೀನ್ ಎಂದೇ ಪರಿಚಿತರು. ಇದು ಅವರ ಪಾತ್ರದ ಹೆಸರಾಗಿತ್ತು. ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ನಿರ್ಮಾಪಕ ಈ ಸುದ್ದಿಯನ್ನು ಖಚಿತ ಪಡಿಸುತ್ತಿದ್ದಂತೆಯೇ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

- Advertisement -

Join Whatsapp