ಶೂಟಿಂಗ್ ವೇಳೆ ತೀವ್ರ ಗಾಯ: ನಟ ಸೂರ್ಯ ಆಸ್ಪತ್ರೆಗೆ ದಾಖಲು

Prasthutha|

ಚೆನ್ನೈ: ತಮಿಳು ನಟ ಸೂರ್ಯಗೆ ಶೂಟಿಂಗ್ ವೇಳೆ ತೀವ್ರ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -


ಕಂಗುವ ಶೂಟಿಂಗ್ ವೇಳೆ ಅವರ ಭುಜದ ಮೇಲೆ ಕ್ಯಾಮೆರಾ ಬಿದ್ದ ಕಾರಣದಿಂದಾಗಿ ಏಟು ಬಿದ್ದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವಿಷಯ ಕೇಳುತ್ತಿದ್ದಂತೆಯೇ ಸೂರ್ಯನ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.


ಈ ಕುರಿತಂತೆ ಸ್ವತಃ ಸೂರ್ಯ ಅವರೇ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆತಂಕ ಪಡುವಂಥದ್ದು ಏನೂ ಆಗಿಲ್ಲ. ಚೇತರಿಸಿಕೊಳ್ಳುತ್ತಿದ್ದೇನೆ. ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

Join Whatsapp