ಎಫ್​ಟಿಐಐ ಅಧ್ಯಕ್ಷರಾಗಿ ನಟ ಆರ್. ಮಾಧವನ್ ಆಯ್ಕೆ

Prasthutha|

ಹೊಸದಿಲ್ಲಿ: ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಗೆ (FTII) ಅಧ್ಯಕ್ಷರನ್ನಾಗಿ ತಮಿಳು ನಟ, ನಿರ್ದೇಶಕ ಆರ್ ಮಾಧವನ್ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ.

- Advertisement -

 ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಎಕ್ಸ್ (ಟ್ವಿಟ್ಟರ್) ಮೂಲಕ ಈ ವಿಷಯವನ್ನು ಘೋಷಿಸಿದ್ದಾರೆ. ಆರ್.ಮಾಧವನ್ ನಟಿಸಿ, ನಿರ್ದೇಶನ ಮಾಡಿರುವ ‘ರಾಕೆಟ್ರಿ; ದಿ ನಂಬಿ ಎಫೆಕ್ಟ್’ ಸಿನಿಮಾಕ್ಕೆ ಕೆಲವು ದಿನಗಳ ಹಿಂದಷ್ಟೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗಿತ್ತು. ಇದೀಗ ಮತ್ತೊಂದು ಸಿಹಿ ಸುದ್ದಿ ನಟನ ಅರಸಿ ಬಂದಿದೆ.

ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿರುವ ಆರ್ ಮಾಧವನ್​ಗೆ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಹಾಗೂ ಬಲವಾದ ನೈತಿಕತೆಯಿಂದ ಈ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತೀರೆಂಬ ವಿಶ್ವಾಸವಿದೆ. ಧನಾತ್ಮಕ ಬದಲಾವಣೆಗಳನ್ನು ಸಂಸ್ಥೆಯಲ್ಲಿ ತನ್ನಿ ಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ಯಿರಿ. ನಿಮಗೆ ನನ್ನ ಅಭಿನಂದನೆಗಳು” ಎಂದು ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

- Advertisement -

 ಅನುರಾಗ್ ಠಾಕೂರ್ ಅವರ ಟ್ವಿಟ್​ಗೆ ಪ್ರತಿಕ್ರಿಯೆ ನೀಡಿರುವ ಆರ್ ಮಾಧವನ್, ”ಈ ಗೌರವ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಎಲ್ಲರ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಶಕ್ತಿ ಮೀರಿ ಯತ್ನಿಸುತ್ತೇನೆ” ಎಂದಿದ್ದಾರೆ.

ಆರ್ ಮಾಧವನ್ ಗೂ ಮುನ್ನ, ಶೇಖರ್ ಕಪೂರ್ ಅವರು ಎಫ್​ಟಿಐಐ ಅಧ್ಯಕ್ಷರಾಗಿದ್ದರು. ಇದೀಗ ಮಾಧವನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಪ್ರಾತಿನಿಧ್ಯ ನೀಡಿದಂತಾಗಿದೆ. ಪುಣೆಯಲ್ಲಿರುವ ಎಟಿಐಐ ಭಾರತದ ಅಗ್ರಗಣ್ಯ ಸಿನಿಮಾ ಹಾಗೂ ದೂರದರ್ಶನ ಸಂಸ್ಥೆಯಾಗಿದೆ. 1961 ರಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ 63 ವರ್ಷದ ಇತಿಹಾಸವಿದೆ. ದಕ್ಷಿಣ ಭಾರತ ಚಿತ್ರರಂಗದವರು ಈ ಸಂಸ್ಥೆಯ ಅಧ್ಯಕ್ಷರಾಗಿರುವುದು ಬಹಳ ಕಡಿಮೆ. ಮಲಯಾಳಂ ಸಿನಿಮಾ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಕನ್ನಡದ ಗಿರೀಶ್ ಕಾರ್ನಾಡ್, ಯುಆರ್ ಅನಂತಮೂರ್ತಿ ಅವರುಗಳು ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆರ್​.ಕೆ.ಲಕ್ಷ್ಮಣ್, ಶ್ಯಾಮ್ ಬೆನಗಲ್, ಮೃಣಾಲ್ ಸೇನ್, ಇತ್ತೀಚೆಗೆ ಅನುಪಮ್ ಖೇರ್, ಶೇಕರ್ ಕಪೂರ್ ಅವರುಗಳು ಸಹ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Join Whatsapp