ಬೆಂಗಳೂರು: ನಟ ಕಿಶೋರ್ ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲಾಗಿದೆ.
ಸಂಸ್ಥೆಯ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.
ಆದರೆ ಯಾವ ಕಾರಣಕ್ಕೆ, ಯಾವ ಟ್ವೀಟ್ ಗಾಗಿ ಖಾತೆ ಅಮಾನತು ಮಾಡಲಾಗಿದೆ ಎನ್ನುವುದನ್ನು ಹೇಳಿ ಎಂದು ಅಭಿಮಾನಿಗಳು ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಕಿಶೋರ್ ಅವರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಕಿಶೋರ್ ಅವರು ಟ್ವಿಟರ್ ನಲ್ಲಿ ಆಗಾಗ ಅನೇಕ ಪ್ರಗತಿಪರ ವಿಚಾರಗಳ ಬಗ್ಗೆ ಮುಕ್ತವಾಗಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಕಾಂತಾರ ಸಿನಿಮಾ ವಿವಾದವಾದಾಗಲೂ ಕಿಶೋರ್ ಪ್ರತಿಕ್ರಿಯಿಸಿದ್ದರು. ನಂಬಿಕೆ ಇರಬೇಕು, ಆದರೆ, ಮೂಢನಂಬಿಕೆ ಇರಬಾರದು ಎಂದು ಹೇಳಿದ್ದರು.