ಮುಂಬೈ: ತಮ್ಮ ರಿವಾಲ್ವರ್ ನಿಂದ ಗುಂಡು ಆಕಸ್ಮಿಕವಾಗಿ ಸಿಡಿದು ಗಾಯಗೊಂಡಿದ್ದ ನಟ, ರಾಜಕಾರಣಿ ಗೋವಿಂದ ಆಸ್ಪತ್ರೆಯಿಂದ ಇಂದು (ಶುಕ್ರವಾರ) ಬಿಡುಗಡೆಯಾಗಿದ್ದಾರೆ.
ಅಕ್ಟೋಬರ್ 1ರಂದು ಮನೆಯಲ್ಲಿ ಬೆಳಗ್ಗೆ 4.45ರ ಸುಮಾರಿಗೆ ತಮ್ಮದೇ ಲೈಸೆನ್ಸ್ಡ್ ರಿವಾಲ್ವರ್ ಕ್ಲೀನ್ ಮಾಡ್ತಿದ್ದ ವೇಳೆ ಕಾಲಿಗೆ ಮಿಸ್ ಫೈರ್ ಆಗಿದೆ ಎಂಬುದಾಗಿ ತಿಳಿದುಬಂದಿತ್ತು. ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ಗೋವಿಂದ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
60 ವರ್ಷದ ಗೋವಿಂದ ಚೇತರಿಕೆ ಹಂತದಲ್ಲಿದ್ದು, ಕುಟುಂಬದ ಸದಸ್ಯರು ಅವರನ್ನು ಗಾಲಿಕುರ್ಚಿ ಸಹಾಯದಿಂದ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನನ್ನ ಆರೈಕೆಗೆ ಪ್ರಾರ್ಥಿಸಿದ, ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಗೋವಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.