ನಟ ದ್ವಾರಕೀಶ್ ಸೇರಿದಂತೆ ಮೂವರಿಗೆ ಡಾಕ್ಟರೇಟ್ ಗೌರವ

Prasthutha|

ಬೆಂಗಳೂರು: ಕನ್ನಡದ ಖ್ಯಾತ ನಟ, ನಿರ್ದೇಶಕ ದ್ವಾರಕೀಶ್ ಸೇರಿದಂತೆ ಮೂವರಿಗೆ ಬೆಂಗಳೂರು ವಿಶ್ವ ವಿದ್ಯಾಲಯ  ಡಾಕ್ಟರೇಟ್ ಘೋಷಿಸಿದೆ.

- Advertisement -

ಚಿತ್ರನಟ ಬಿ.ಎಸ್. ದ್ವಾರಕೀಶ್, ಕಲಾವಿದ ಡಾ.ಟಿ. ಅನಿಲ್ ಕುಮಾರ್ ಮತ್ತು ಅಮೆರಿಕದ ಕನ್ನಡ ಕೂಟಗಳ ಸಂಘಟನೆ (ಅಕ್ಕ) ಅಧ್ಯಕ್ಷ ಅಮರನಾಥ್ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಲಾಗಿದೆ.

ಚಿತ್ರರಂಗದಲ್ಲಿ ನಟ ದ್ವಾರಕೀಶ್ ಮಾಡಿದ ಸಾಧನೆ ಪುರಸ್ಕರಿಸಿ ಗೌರದ ಡಾಕ್ಟರೇಟ್’ಗೆ ಅವರನ್ನು ಆಯ್ಕೆ ಮಾಡಲಾಗಿದೆ. 1964ರಲ್ಲಿ ‘ವೀರಸಂಕಲ್ಪ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

- Advertisement -

ಡಿಸೆಂಬರ್ 5ರಂದು ಜ್ಞಾನಭಾರತಿ ಆಡಿಟೋರಿಯಂನಲ್ಲಿ ನಡೆಯುವ 57ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

Join Whatsapp