ಕೆಂಪು ಕೋಟೆ ದಾಳಿ ಪ್ರಕರಣ | ಜಾಮೀನು ಪಡೆದು ಹೊರಬಂದಿದ್ದ ನಟ ದೀಪ್ ಸಿಧು ಮತ್ತೆ ಬಂಧನ!

Prasthutha|

ನವದೆಹಲಿ: ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದ ಕೆಲವೇ ಗಂಟೆಗಳಲ್ಲಿ ದೆಹಲಿ ಪೊಲೀಸರು ನಟ ದೀಪ್ ಸಿಧು ಅವರನ್ನು ಬಂಧಿಸಿದ್ದಾರೆ.

ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಎಫ್‌ಐಆರ್‌ ದಾಖಲಿಸಿತ್ತು ಎನ್ನಲಾಗಿದೆ. ಪ್ರತಿಭಟನೆ ವೇಳೆ ಪಾರಂಪರಿಕ ಕಟ್ಟಡದ ಕೆಲವು ಭಾಗಗಳು ಹಾನಿಗೊಳಗಾಗಿದೆ ಎಂದು ASI ಎಫ್‌ಐಆರ್‌ ದಾಖಲಿಸಿದೆ.

- Advertisement -

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಗಣರಾಜ್ಯೋತ್ಸವ ದಿನದಂದು ರೈತರ ಟ್ರಾಕ್ಟರ್ ಮೆರವಣಿಗೆಯ ವೇಳೆ ಕೆಂಪು ಕೋಟೆಯಲ್ಲಿ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಫೆಬ್ರವರಿ 9 ರಂದು ಬಂಧಿಸಲ್ಪಟ್ಟಿದ್ದ ದೀಪ್ ಸಿಧುಗೆ ದೆಹಲಿಯ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿತ್ತು.

- Advertisement -