ಚೆನ್ನೈ: ತಮಿಳಿನ ಖ್ಯಾತ ಖಳ ನಟ ಡ್ಯಾನಿಯಲ್ ಬಾಲಾಜಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಗೌತಮ್ ವಾಸುದೇವ ಮೆನನ್ ನಿರ್ದೇಶನದ ‘ಕಾಖ ಕಾಖ’ ಸಿನಿಮಾದಲ್ಲಿ ಸೂರ್ಯ ಜೊತೆ ತೆರೆ ಹಂಚಿಕೊಂಡು ಅವರು ಗಮನ ಸೆಳೆದಿದ್ದರು. ಡ್ಯಾನಿಯಲ್ ಅವರು ಸಣ್ಣ ವಯಸ್ಸಿಗೆ ನಿಧನ ಹೊಂದಿದ್ದು ಅನೇಕರಿಗೆ ಬೇಸರ ತರಿಸಿದೆ.
ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಮೆಚ್ಚುಗೆ ಪಡೆದು ಬಂದರು. ಮಮ್ಮೂಟಿ ನಟನೆಯ ‘ಬ್ಲ್ಯಾಕ್’ ಸಿನಿಮಾದಲ್ಲಿ ಬಾಲಾಜಿ ಬಣ್ಣ ಹಚ್ಚಿದ್ದರು. ಮೋಹನ್ಲಾಲ್ ನಟನೆಯ ‘ಭಗವಾನ್’, ಮಮ್ಮೂಟಿ ನಟನೆಯ ‘ಡ್ಯಾಡಿ ಕೂಲ್’ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು.