ನಟ ದರ್ಶನ್ ಗೆ ಜಾಮೀನು: ಜೈಲಿನಲ್ಲಿರುವ ಪವಿತ್ರಾ ಗೌಡ ಹೇಳಿದ್ದೇನು?

Prasthutha|

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅಂದರ್ ಆಗಿದ್ದ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದೆ.

- Advertisement -


ಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ಐದು ತಿಂಗಳುಗಳಿಂದ ಜೈಲಿನಲ್ಲಿದ್ದ ದರ್ಶನ್ ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.


ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಕೂಡ ಸಂತಸಗೊಂಡಿದ್ದಾರೆ. ಟಿವಿಯಲ್ಲಿ ದರ್ಶನ್ ಗೆ ಬೇಲ್ ಸಿಕ್ಕ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -


ತನ್ನಿಂದ ನಟ ದರ್ಶನ್ ಜೈಲು ಸೇರಿದ ಬಗ್ಗೆ ಪವಿತ್ರಾಗೆ ಬೇಸರವಿತ್ತು. ಸದ್ಯ ನಟ ದರ್ಶನ್ ಗೆ ಬೇಲ್ ಸಿಕ್ಕ ಹಿನ್ನೆಲೆ ಪವಿತ್ರಾ ಕೊಂಚ ನಿರಾಳಗೊಂಡಿದ್ದಾರೆ. ಇನ್ನೂ ನನಗೆ ಯಾವಾಗ ಜಾಮೀನು ಸಿಗುತ್ತೆ ಅಂತ ಪವಿತ್ರಾ ಗೌಡ ಅಲ್ಲೇ ಇದ್ದ ಇತರ ಖೈದಿಗಳೊಂದಿಗೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.


ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್ ನಲ್ಲಿ ಪವಿತ್ರಾಗೌಡ ಇದ್ದಾರೆ. ದರ್ಶನ್ ಗೆ ಬೇಲ್ ಸಿಕ್ಕ ಹಿನ್ನೆಲೆ ತನಗೂ ಬೇಲ್ ಸಿಗುವ ಭರವಸೆಯಲ್ಲಿದ್ದಾರೆ.



Join Whatsapp