ಬಿಜೆಪಿಗೆ ಬೆಂಬಲ ಘೋಷಿಸಿದ ನಟ ಚಿರಂಜೀವಿ

Prasthutha|

ಹೈದರಾಬಾದ್: ತೆಲುಗಿನ ಸ್ಟಾರ್ ನಟ ಹಾಗೂ ರಾಜಕಾರಣಿ ಚಿರಂಜೀವಿ ಆಂಧ್ರಪ್ರದೇಶದ ಲೋಕಸಭೆ ಚುನಾವಣೆಗೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಗೆ ಎನ್​ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ.

- Advertisement -

ಚಿರಂಜೀವಿ ಇನ್ನು ನಮ್ಮ ಪಕ್ಷದಲ್ಲೇ ಇದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳಿದ್ದ ಬೆನ್ನಲ್ಲೇ, ಚಿರಂಜೀವಿ ಅವರಿಂದ ಎನ್.ಡಿ.ಎ. ಮೈತ್ರಿಕೂಟಕ್ಕೆ ಬೆಂಬಲದ ಘೋಷಣೆ ಹೊರಬಿದ್ದಿದೆ.

ರಾಜ್ಯದಲ್ಲಿ ಪ್ರಬಲವಾಗಿರುವ ಕಾಪು ಸಮುದಾಯಕ್ಕೆ ಸೇರಿದ ಚಿರಂಜೀವಿ ಬೆಂಬಲ ಘೋಷಿಸಿರುವುದು ಎನ್.ಡಿ.ಎ. ಮೈತ್ರಿಕೂಟಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ ಎಂದು ಹೇಳಲಾಗಿದೆ.

- Advertisement -

ಆಂಧ್ರಪ್ರದೇಶದ ಅಭಿವೃದ್ಧಿಗೆ ಎನ್.ಡಿ.ಎ. ಅಭ್ಯರ್ಥಿಗಳಿಗೆ, ಅದರಲ್ಲಿಯೂ ವಿಶೇಷವಾಗಿ ನನ್ನ ಆಪ್ತರಾದ ಬಿಜೆಪಿ ಅಭ್ಯರ್ಥಿ ಸಿ.ಎಂ. ರಮೇಶ್ ಮತ್ತು ಜನಸೇನಾ ಅಭ್ಯರ್ಥಿ ಪಿ. ರಮೇಶ್ ಬಾಬು ಅವರಿಗೆ ಮತ ಹಾಕಿ ಎಂದು ಚಿರಂಜೀವಿ ಮನವಿ ಮಾಡಿದ್ದಾರೆ.

Join Whatsapp