ನಟ ಅರ್ಜುನ್ ಸರ್ಜಾ ತಾಯಿ ವಿಧಿವಶ

Prasthutha|

ಮಧುಗಿರಿ: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ತಾಯಿ, ಹಿರಿಯ ನಟ ಶಕ್ತಿಪ್ರಸಾದ್ ಅವರ ಪತ್ನಿ ಲಕ್ಷ್ಮೀ ದೇವಮ್ಮ ಇಂದು ನಿಧನವಾಗಿದ್ದಾರೆ.

- Advertisement -


ಅವರಿಗೆ 85 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀದೇವಿಯವರನ್ನು 10 ದಿನಗಳ ಹಿಂದೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ವಿಧಿವಶವಾದರು.

- Advertisement -


ಲಕ್ಷ್ಮಿದೇವಮ್ಮ ಅವರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪಾರ್ಥಿವ ಶರೀರ ಜಯನಗರದ ಅಪೋಲೋ ಆಸ್ಪತ್ರೆಯಿಂದ ಅರ್ಜುನ್ ಸರ್ಜಾ ಅವರ ನಿವಾಸಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ.



Join Whatsapp