ಮಡಿಕೇರಿ ಕ್ಷೇತ್ರದ SDPI ಅಭ್ಯರ್ಥಿ ಅಮೀನ್ ಮೊಹ್ಸಿನ್ ಅವರಿಗೆ ಸ್ವಾಗತ ಕೋರಿದ ಕುಶಾಲನಗರದ ಕಾರ್ಯಕರ್ತರು

Prasthutha|

ಮಡಿಕೇರಿ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಅಭ್ಯರ್ಥಿಯಾಗಿ ಮಡಿಕೇರಿ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಅಮೀನ್ ಮೊಹ್ಸಿನ್ ಅವರನ್ನು ಗುರುವಾರ ಸಂಜೆ 5.30 ಗಂಟೆಗೆ ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಕೊಪ್ಪ ಗೇಟ್ ಬಳಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತವನ್ನು ಕೋರಿದರು.

- Advertisement -

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಬ್ದುಲ್ಲ ಅಡ್ಕರ್, ಉಪಾಧ್ಯಕ್ಷರಾದ ನಾಗರತ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್, ಕೋಶಾಧಿಕಾರಿ ಮನ್ಸೂರ್ ಅಲಿ, ಸಮಿತಿ ಸದಸ್ಯರಾದ ಸಲಾಂ ಕೂಡಿಗೆ, ಮಡಿಕೇರಿ ನಗರಾಧ್ಯಕ್ಷ ರಿಝ್ವಾನ್, ನಗರ ಉಪಾಧ್ಯಕ್ಷ ಮೈಕಲ್ ವೇಗಸ್, ಕಾರ್ಯದರ್ಶಿ ಇಬ್ರಾಹಿಂ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಉಸ್ಮಾನ್ ಸುಂಟಿಕೊಪ್ಪ, ನಗರಾಧ್ಯಕ್ಷರಾದ ಝಕ್ರಿಯ, ಕಾರ್ಯದರ್ಶಿ ಬಯಾನ್, ಮುಜೀಬ್, ಖಲೀಲ್, ಆಬಿದ್, ಹನೀಫ್, ಅಝೀಝ್ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.

Join Whatsapp