ಮಾರಕಾಸ್ತ್ರದೊಂದಿಗೆ ಮಸೀದಿಯ ಧರ್ಮಗುರುಗಳ ಕೊಠಡಿ ಬಳಿ ಬಂದ ಸಂಘಪರಿವಾರದ ಕಾರ್ಯಕರ್ತ

Prasthutha|

ಬಿ.ಸಿ.ರೋಡ್: ಸಂಘ ಪರಿವಾರದ ಕಾರ್ಯಕರ್ತನೋರ್ವ ಮಾರಕಾಸ್ತ್ರದೊಂದಿಗೆ ಮಸೀದಿಗೆ ನುಗ್ಗಲು ಯತ್ನಿಸಿದ ಘಟನೆ ಕಳೆದ ರಾತ್ರಿ ಇಲ್ಲಿನ ಮಿತ್ತಬೈಲ್ ಜುಮಾ ಮಸ್ಜಿದ್ ನಲ್ಲಿ ನಡೆದಿದೆ.
ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತೊಂದು ತಪ್ಪಿದಂತಾಗಿದೆ.
ಕಲ್ಲಡ್ಕ ಬಳಿಯ ನಿವಾಸಿ ವಿಶ್ವನಾಥ ಎಂಬ ದುಷ್ಕರ್ಮಿ ಮುಸ್ಲಿಮರ ರೀತಿಯಲ್ಲಿ ಮಸೀದಿ ಪ್ರವೇಶಿಸಿ ಧರ್ಮ ಗುರುಗಳ ಕೊಠಡಿಯತ್ತ ತೆರಳುತ್ತಿದ್ದ. ಈ ವೇಳೆ ಅಲ್ಲಿದ್ದ ಕೆಲವರಿಗೆ ಈತನ ಬಗ್ಗೆ ಸಂಶಯ ಮೂಡಿದೆ. ತಕ್ಷಣ ಎಚ್ಚೆತ್ತುಕೊಂಡ ಅಲ್ಲಿದ್ದ ಯುವಕರು ಆತನನ್ನು ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೊದಲಿಗೆ ಆತ, ನಾನು ಮಡಿಕೇರಿ ಯವನು ಎಂದು ಹೇಳಿದ್ದಾನೆ, ಬಳಿಕ ಕಲ್ಲಡ್ಕ ನಿವಾಸಿ ವಿಶ್ವನಾಥ ಎಂದು ತಿಳಿಸಿದ್ದಾನೆ. ಆತನು ಬಂದ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಮಾರಕಾಸ್ರ್ತ ಪತ್ತೆಯಾಗಿದೆ ಎನ್ನಲಾಗಿದೆ.

- Advertisement -

ತಕ್ಷಣ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಈ ಘಟನೆಯು ಕಾಸರಗೋಡು ಮಸೀದಿ ಯೊಳಗೆ ಆರೆಸ್ಸೆಸ್ಸ್ ಕಾರ್ಯಕರ್ತರು ನುಗ್ಗಿ ರಿಯಾಝ್ ಮೌಲವಿಯನ್ನು ಬರ್ಬರವಾಗಿ ಹತ್ಯೆ ಮಾಡಿದನ್ನು ನೆನಪಿಸುವಂತಿದೆ.
ಪೋಲೀಸ್ ಇಲಾಖೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಈತನನ್ನು ಪ್ರಚೋದನೆ ನೀಡಿ ಕಳಿಸಿ ಕೊಟ್ಟವರನ್ನು ಇದರ ಹಿಂದಿರುವ ಎಲ್ಲರನ್ನೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Join Whatsapp