ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಾರ್ಮಿಕ ಇಲಾಖೆ) ಡಾ. ಕಲ್ಪನಾ ಅವರನ್ನು ಭೇಟಿ ಮಾಡಿ ಸುದೀರ್ಘವಾದ ಸಭೆ ನಡೆಸಿದೆ.
ಸಂಘಟನೆಗಳು ಮಂಡಿಸಿದ ಬೇಡಿಕೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆದಿದ್ದು, ಬೇಡಿಕೆಗಳನ್ನು ಒಂದು ನಿರ್ದಿಷ್ಟ ಸಮಯದೊಳಗೆ ಬಗೆಹರಿಸಲು ಬೇಕಾದ ಕ್ರಮಗಳನ್ನು ಮಂಡಳಿ ಅಧಿಕಾರಿಗಳು ಕೂಡಲೇ ಕೈಗೊಳ್ಳಬೇಕೆಂದು ಡಾ. ಕಲ್ಪನಾ ಅವರು ನಿರ್ದೇಶನ ನೀಡಿದ್ದಾರೆ. ಕಾರ್ಮಿಕರ ಕಲ್ಯಾಣ ಮಂಡಳಿ ಹಿರಿಯ ಅಧಿಕಾರಿ ಬಾಬುರಾವ್ ಆನ್ಲೈನ್ ಮೂಲಕ ಸಭೆಯಲ್ಲಿ ಹಾಜರಿದ್ದರು.
ಸಮನ್ವಯ ಸಮಿತಿ ಪರವಾಗಿ ಸಭೆಯಲ್ಲಿ ಹಾಜರಿದ್ದ ಮುಖಂಡರು ಮನವಿಯಲ್ಲಿನ ಪ್ರತಿಯೊಂದು ಅಂಶಗಳನ್ನು ಎ.ಸಿ.ಎಸ್ ಅವರ ಗಮನಕ್ಕೆ ಪ್ರತ್ಯೇಕವಾಗಿ ತಂದಿದ್ದಾರೆ. ಪ್ರತಿ ಬೇಡಿಕೆಗಳ ಈಡೇರಿಕೆಗೆ ಬೇಕಾದ ಸಾಧ್ಯತೆಗಳನ್ನು ಆನ್ಲೈನ್ ನಲ್ಲಿ ಹಾಜರಿದ್ದ ಮಂಡಳಿ ಅಧಿಕಾರಿಗಳ ಜತೆ ಚರ್ಚಿಸಿ ಜಾರಿಗೊಳಿಸಲು ಬೇಕಾದ ಸೂಚನೆಗಳನ್ನು ಎ.ಸಿ.ಎಸ್ ನೀಡಿದರು.
ಸಮನ್ವಯ ಸಮಿತಿ ಪರವಾಗಿ ಕೆ.ಮಹಾಂತೇಶ, ಶಾಮಣ್ಣ ರೆಡ್ಡಿ, ಶಿವಣ್ಣ, ಉಮೇಶ್ ಹೆಚ್.ಜಿ., ಬಿ ಉಮೇಶ, ಧನಶೇಖರ್, ನಾಗನಾಥ್, ಲೀಲಾವತಿ, ಶ್ರೀನಿವಾಸ್, ಷಣ್ಮುಗಂ ಹಾಗೂ ಮಹಾದೇವಿ ಸಭೆಯಲ್ಲಿ ಭಾಗವಹಿಸಿದ್ದರು.