ಬೆಂಗಳೂರು: ಭಾರತೀಯ ಕಂಪನಿ ಸೆಕ್ರೆಟರಿ (ಐ.ಸಿ.ಎಸ್.ಐ) ಸಂಸ್ಥೆಯ ದಕ್ಷಿಣ ವಲಯದ ಘಟಿಕೋತ್ಸವ ಬೆಂಗಳೂರಿನಲ್ಲಿಂದು ನಡೆಯಿತು.
ಕಾಸೀಯಾ ಆಡಿಟೋರಿಯಂ ನಲ್ಲಿ ನಡೆದ ಘಟಿಕೋತ್ಸದಲ್ಲಿ ಬೆಂಗಳೂರಿನ ಸಂಸ್ಥೆ ಸುಮಾರು 250 ಸದಸ್ಯತ್ವ ನೋಂದಣಿ ಮಾಡಿ ಗಮನಾರ್ಹ ಸಾಧನೆ ಮಾಡಿದ್ದು, ಬೆಂಗಳೂರಿನ ಐ.ಸಿ.ಎಸ್.ಐ ವಿಭಾಗಕ್ಕೆ ಸದಸ್ಯತ್ವ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದಲ್ಲದೇ 85 ಸಹ ಸದಸ್ಯತ್ಬ ಪಡೆದವರನ್ನೂ ಸಹ ಅಭಿನಂದಿಸಲಾಯಿತು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಇಗರ್ಸೋಲ್ ಸೆಲ್ಲಾದುರೈ ಘಟಿಕೋತ್ಸವ ಭಾಷಣ ಮಾಡಿ, ಕಂಪೆನಿ ಸೆಕ್ರೆಟರಿ ಹುದ್ದೆ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಕಂಪನಿ ಸೆಕ್ರೆಟರಿಗಳು ಸಮಾಜ ವಿಜ್ಞಾನಿಗಳು. ದತ್ತಾಂಶ ಸಂಗ್ರಹಣೆಯಿಂದ ಹಿಡಿದು ಆಡಳಿತದ ಎಲ್ಲಾ ಹಂತದಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸಮುದಾಯದ ಹಿತರಕ್ಷಣೆಗಾಗಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅಸಮಾನತೆ ಮತ ವಿರೋಧಾಭಾಸಗಳನ್ನು ಪರಿಹರಿಸಲು ಸಮೃದ್ಧ ಚಿಂತನೆಯೊಂದಿಗೆನ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದರು.
ಐ.ಸಿ.ಎಸ್.ಐ ಅಧ್ಯಕ್ಷ ಸಿ.ಎಸ್. ನಾಗೇಂದ್ರರಾವ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತೀಯ ಕಂಪೆನಿ ಸೆಕ್ರೆಟರಿ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಕ್ರಾಂತಿಕಾರಕ ಡಿಜಿಟಲ್ ಯುಗದಲ್ಲಿ ಕಂಪೆನಿ ಸೆಕ್ರೆಟರಿ ವಲಯದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿದೆ ಎಂದರು.
ಐ.ಸಿ.ಎಸ್.ನ ಕಾರ್ಯದರ್ಶಿ ಆಶೀಸ್ ಮೋಹನ್ ಮತ್ತಿತರರು ಉಪಸ್ಥಿತಿತರಿದ್ದರು.