ಹಾಸನ : ಇತ್ತೀಚಿಗೆ ಶಿವಮೊಗ್ಗ ದಲ್ಲಿ ನಡೆದ ಶಿವಮೊಗ್ಗ ಓಪನ್ 4ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಹೋಲಿ ಮೌಂಟ್ ಶಾಲೆಯ 8 ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮೊಹಮ್ಮದ್ ಸಕ್ಲೇನ್ ಕುಮಟಿ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಪ್ರಶಸ್ತಿಗಳನ್ನು ಗೆಲ್ಲುವುದರ ಮೂಲಕ ಜಿಲ್ಲೆಗೆ ಹಾಗು ಓದುತ್ತಿರುವ ಶಾಲೆಗೆ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಶ್ರೀಮತಿ ಆಯೀಷಾ ಹಾಗೂ ಅಫ್ಸರ್ ಕೊಡ್ಲಿಪೇಟೆ ದಂಪತಿ ಪುತ್ರನಾಗಿರುವ ಮೊಹಮ್ಮದ್ ಸಕ್ಲೇನ್ ಖ್ಯಾತ ಕರಾಟೆ ತರಬೇತುದಾರರಾಗಿರುವ ಆರೀಫ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಶಿವಮೊಗ್ಗ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷಿಯಾ, ಅಮೇರಿಕಾ ದೇಶದ ಕ್ರೀಡಾಪಟುಗಳ ಜೊತೆಗೆ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿದಂತೆ 14 ರಾಜ್ಯಗಳ 2000 ಕ್ಕೊ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.