ಜಾಮೀನಿಲ್ಲದೆ ಆರೋಪಿ ಜೈಲಿನಲ್ಲಿ ಸುಮ್ಮನೆ ಕೊಳೆಯಲು ಬಿಡಬಾರದು: ಹೈಕೋರ್ಟ್

Prasthutha|

ನವದೆಹಲಿ: ಅವಧಿಗೆ ಮೊದಲೇ ಸೆರೆಮನೆಯಿಂದ ಬಿಡುಗಡೆ ಇಲ್ಲವೆ ಜಾಮೀನಿನ ಮೇಲೆ ಬಿಡುಗಡೆ ತಡವಾಗುವುದನ್ನು ತಪ್ಪಿಸಲು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

- Advertisement -


ಪಂಜಾಬ್, ಹರಿಯಾಣ, ಚಂಡೀಗಡ ಎಲ್ಲ ಕಡೆ ಶಿಕ್ಷಿತ, ವಿಚಾರಣಾಧೀನ ಜಿಲ್ಲಾ ಮತ್ತು ಕೇಂದ್ರೀಯ ಜೈಲುಗಳಲ್ಲಿರುವವರಿಗೆ ಇದು ಅನ್ವಯಿಸುತ್ತದೆ.
ಸರಕಾರಗಳು ಅವಧಿ ಪೂರ್ವ ಬಿಡುಗಡೆ ಮಾಡಲು ಒದ್ದಾಡುವ ಬದಲು ಸೂಕ್ತ ನಿಯಮಾವಳಿ ಅದನ್ನು ನಿರ್ಧರಿಸಲಿ ಎಂದು ಜಸ್ಟಿಸ್ ಅರವಿಂದ್ ಸಿಂಗ್ ಸಂಗ್ವಾನ್ ಈ ಏಳು ನಿರ್ದೇಶಕ ಸೂತ್ರಗಳನ್ನು ಹೊರಗಿಟ್ಟಿದ್ದಾರೆ.


ಪಂಜಾಬ್, ಹರಿಯಾಣ, ಚಂಡೀಗಡದ ಗೃಹ ಇಲಾಖೆಗಳು ಹೈ ಕೋರ್ಟ್ ಆದೇಶಕ್ಕೆ ಬೆಲೆ ಕೊಡದೆ ಬಿಡುಗಡೆಗೆ ಮುಂದಾಗುವುದನ್ನು ಜಸ್ಟಿಸ್ ಸಂಗ್ವಾನ್ ಖಂಡಿಸಿದರು.
“ಹಲವು ವರ್ಷಗಳಿಂದ ಅಂತಿಮ ತೀರ್ಮಾನ ತೆಗೆದುಕೊಂಡೇ ಇಲ್ಲ. ಹಾಗಾಗಿ ಜೈಲುಗಳೆಲ್ಲ ತುಂಬಿ ತುಳುಕುತ್ತಿವೆ. ಮ್ಯಾಜಿಸ್ಟ್ರೇಟರ ಅವಗಾಹನೆಗೆ ತಂದು, ಜೈಲು ಸೂಪರಿನ್ ಟೆಂಡೆಂಟರು ಈ ಮಾರ್ಗದರ್ಶಿ ಸೂತ್ರದಡಿ ಗುರುತಿಸಿದವರನ್ನು ಬಿಡುಗಡೆ ಮಾಡಬೇಕು. ಶಿಕ್ಷಿತರು ಅನಗತ್ಯವಾಗಿ ಅವಧಿ ಮೀರಿ ಏಕೆ ಸೆರೆಮನೆಯಲ್ಲಿ ಇರಬೇಕು. ಚಾರ್ಜ್ ಶೀಟ್ ಇಲ್ಲದೆ ಒಳಗಿರಬೇಕು?” ಇವೆಲ್ಲದರ ಮೇಲೆ ಈ ಮಾರ್ಗದರ್ಶಿ ಸೂತ್ರ ರೂಪಿಸಲಾಗಿದೆ.
ವಕೀಲರುಗಳಾದ ಅಕ್ಷಯ್ ರಾಣಾ ಮತ್ತು ಅರವಿಂದ್ ಕುಮಾರ್ ಶರ್ಮಾ ಅವರ ಮನವಿಗೆ ಜಸ್ಟಿಸ್ ಸಂಗ್ವಾನ್ ಅವರು ಸಮಯ ಮಿತಿ ಇಲ್ಲದಿರುವುದು, ಅಪಕ್ವ ವಕೀಲಿಕೆ ಮೊಕದ್ದಮೆ, ಬಿಡುಗಡೆ ಎಳೆಯುವಂತೆ ಮಾಡುತ್ತದೆ ಎಂದರು.

- Advertisement -


ಕಾಲ ಮೀರಿ ಜೈಲಲ್ಲಿ ಇರುವವರ ಬಗ್ಗೆ ಸಮಗ್ರ ವರದಿ ನೀಡುವಂತೆ ನ್ಯಾಯಮೂರ್ತಿ ಸಂಗ್ವಾನ್ ಅವರು ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್, ಕಾರ್ಯದರ್ಶಿ, ಕಾನೂನು ಸೇವಾ ಪ್ರಾಧಿಕಾರದವರಿಗೆ ಆದೇಶ ನೀಡಿದರು. ಈ ಸಂಬಂಧ ಕುಟುಂಬದವರಿಗೂ ತಿಳಿಸಬೇಕು. ಒಂದು ವೇಳೆ ಅವರ ಮುನ್ಬಿಡುಗಡೆ ಕೋರ್ಟಿನಲ್ಲಿ ನಿರಾಕರಿಸಲ್ಪಟ್ಟರೆ ಮಾತ್ರ ಅವರು ಸ್ಥಳೀಯ ಪೋಲೀಸರಲ್ಲಿ ಶರಣಾಗಬೇಕು ಎಂದೂ ಅವರು ಹೇಳಿದರು.


ಹೀಗೆ ಶರಣಾಗುವಾಗ ಸ್ಥಳೀಯ ಸರಪಂಚ, ಜಮಾದಾರ, ಊರಿನ ಕಾಯಂ ವಾಸಿ ಗುರುತು ಇತ್ಯಾದಿ ದಾಖಲಾಗಬೇಕು.
ಕಾನೂನು ಸೇವಾ ಪ್ರಾಧಿಕಾರದವರು ಈ ಬಗೆಗಿನ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಸೂಕ್ತ ಮಾಹಿತಿಯನ್ನು ಜೈಲು ಸೂಪರಿನ್ ಟೆಂಡೆಂಟರಿಂದಲೂ ಪಡೆಯಬಹುದು.
ಜಾಮೀನು ಬಿಡುಗಡೆಯು ಕಾಯಂ ಬಿಡುಗಡೆ ಅಲ್ಲವಾದುದರಿಂದ ದಾಖಲೆಗಳು, ಪಾಸ್ ಪೋರ್ಟ್ ಇತ್ಯಾದಿ ಪೋಲೀಸರಲ್ಲಿ ಇರಿಸುವುದನ್ನು ಪಾಲಿಸಬೇಕು. ಆದರೆ ಜಾಮೀನಿಲ್ಲದೆ ಆರೋಪಿ ಜೈಲಿನಲ್ಲಿ ಸುಮ್ಮನೆ ಕೊಳೆಯಲು ಬಿಡಬಾರದು ಎಂದೂ ಜಸ್ಟಿಸ್ ಹೇಳಿದರು.

Join Whatsapp