ಕಳ್ಳತನ ಆರೋಪ| ಮರಕ್ಕೆ ಕಟ್ಟಿ ಥಳಿಸಿ ಯುವಕನ ಕೊಲೆ

Prasthutha|

ಚೆನ್ನೈ: ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ, ಥಳಿಸಿ ಕೊಂದಿರುವ ಕ್ರೂರ ಘಟನೆ ತಿರುಚ್ಚಿ-ಮದುರೈ ಹೆದ್ದಾರಿಯ ಮಣಿಗಂಡಂನಲ್ಲಿ ನಡೆದಿದೆ.

ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವಿಧ ರಾಜ್ಯಗಳ ಕಾರ್ಮಿಕರು ಈ ಕೃತ್ಯವನ್ನು ನಡೆಸಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.

- Advertisement -

ಅಪರಿಚಿತ ವ್ಯಕ್ತಿಯೊಬ್ಬ ಮಿಲ್‌ನೊಳಗೆ ಅನುಮತಿಯಿಲ್ಲದೇ ನುಗ್ಗುವುದನ್ನು ನೋಡಿದ ಕಾರ್ಮಿಕರು ಆತನನ್ನು ಹಿಡಿದು, ಕಳ್ಳತನದ ಆರೋಪವನ್ನು ಮಾಡಿದ್ದಾರೆ.  ಬಳಿಕ ಆತನನ್ನು ಮರಕ್ಕೆ ಕಟ್ಟಿ ಹಾಕಿ, ಹಲ್ಲೆ ನಡೆಸಿದ್ದಾರೆ.

ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತನನ್ನು ತುವಕುಡಿಯ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಆತನ ಕುತ್ತಿಗೆ, ಎದೆ, ಬಲಗೈ, ಬಲ ಮೊಣಕಾಲು ಹಾಗೂ ಗುಪ್ತಾಂಗದ ಮೇಲೂ ಗಾಯಗಳಾಗಿರುವುದು ಕಂಡುಬಂದಿದೆ.

ಪೊಲೀಸರು ಮಿಲ್ ಮಾಲೀಕ ಧೀರೇಂದರ್ ಸೇರಿದಂತೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಫೈಝಲ್ ಶೇಕ್ ಹಾಗೂ ಮಫ್ಜುಲ್ ಹಕ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -