ಹಾಲಿನ ಪೌಡರ್‌ ಬಾಕ್ಸ್‌ನಲ್ಲಿಟ್ಟು ಡ್ರಗ್ಸ್ ಮಾರಾಟ: ಆರೋಪಿ ಬಂಧನ

Prasthutha|

ಬೆಂಗಳೂರು: ಹಾಲಿನ ಪೌಡರ್ ಪ್ಯಾಕೆಟ್ ನಲ್ಲಿಟ್ಟು ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಪ್ರಜೆಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತ ಆರೋಪಿಯನ್ನು ಒಕೇಚುಕು ಎಂದು ಗುರುತಿಸಲಾಗಿದೆ.

ಆರೋಪಿ ಅಮೂಲ್ ಹಾಲಿನ ಪ್ಯಾಕೆಟ್ ​ನಲ್ಲಿ ಮಾದಕ ವಸ್ತುವಿಟ್ಟು ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ 260 ಎಂಡಿಎಂಎ ಕ್ರಿಶ್ಟಲ್ ಸೇರಿದಂತೆ 110 ಗ್ರಾಂ ಹೈ ಎಂಡ್ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Join Whatsapp