ಚಿಕ್ಕಮಗಳೂರು: ಇಲ್ಲಿನ ನಗರಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳಿಸಿ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ 12 ಸ್ಥಾನ ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಜೆಡಿಎಸ್ 2, ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ಬಾರಿಯಷ್ಟೇ ಸ್ಥಾನಗಳನ್ನು ಪಡೆದಿವೆ ಎನ್ನುವುದು ವಿಶೇಷ.
ಬಿಜೆಪಿ ಮ್ಯಾಜಿಕ್ ನಂಬರ್ 18 ಅನ್ನು ಪಡೆದು ಪ್ರಯಾಸದ ಗೆಲುವನ್ನು ಸಾಧಿಸಿ ಸರಳ ಬಹುಮತದೊಂದಿಗೆ 3ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಶಾಸಕರ ಬಲಗೈ ಬಂಟ ಎಂದೇ ಗುರುತಿಸಲ್ಪಟ್ಟಿದ್ದ ದೇವರಾಜಶೆಟ್ಟಿ ಬಿಜೆಪಿಯವರೇ ನೀಡಿದ ಒಳ ಹೊಡೆತಕ್ಕೆ ಸೋಲನ್ನಪ್ಪಿದ್ದಾರೆ.
ಒಟ್ಟು ನಗರಸಭೆ ವಾರ್ಡ್: 35
ಬಿಜೆಪಿ -18
ಕಾಂಗ್ರೆಸ್ -12,
ಪಕ್ಷೇತರ -02,
ಜೆಡಿಎಸ್ -02
ಎಸ್ ಡಿಪಿಐ-1