ಆರೋಪಿಯನ್ನು ಕರೆ ತರುತ್ತಿದ್ದಾಗ ಅಪಘಾತ: ನಾಲ್ವರು ಪೊಲೀಸರು ಸೇರಿ ಐದು ಮಂದಿ ದುರ್ಮರಣ

Prasthutha|

ಜೈಪುರ: ಆರೋಪಿಯನ್ನು ಕರೆ ತರುತ್ತಿದ್ದಾಗ ಪೊಲೀಸ್ ವಾಹನವೊಂದು ಅಪಘಾತಕ್ಕೀಡಾಗಿದ್ದು, ನಾಲ್ವರು ಪೊಲೀಸರು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

- Advertisement -

ಆರೋಪಿಯೊಬ್ಬನನ್ನು ದೆಹಲಿಯಿಂದ ಗುಜರಾತ್ ಕರೆತರುತ್ತಿದ್ದ ಗುಜರಾತ್ ಪೊಲೀಸರ ಫಾರ್ಚೂನರ್ ಕಾರು ಭಬ್ರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿದೆ.

ಈ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Join Whatsapp