ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಅಪಘಾತದಂತೆ ಕೊಲೆ: ಇಬ್ಬರು ಸೆರೆ

Prasthutha|

ಮೈಸೂರು: ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿ ಎನ್‌. ಆರ್‌ ಕುಲಕರ್ಣಿಯವರ ಕೊಲೆ ರಹಸ್ಯ ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -


ಮಾದಪ್ಪ, ಮನು ಮತ್ತು ಅರುಣ್‌ ಗೌಡ ಎಂಬವರು ಬಂಧಿತ ಆರೋಪಿಗಳು.

ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿಯು ಅಪಘಾತದಲ್ಲಿ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಅವರ ಅಳಿಯ, ಇದು ಅಪಘಾತವಲ್ಲ, ಕೊಲೆಯೆಂದು ದೂರು ದಾಖಲಿಸಿದ್ದರು. ದೂರಿನಲ್ಲಿ ಕುಲಕರ್ಣಿಯವರು ವಾಸವಿರುವ ಟಿ.ಕೆ ಲೇಔಟ್‌ನ ಮನೆಯ ದಕ್ಷಿಣ ಭಾಗದಲ್ಲಿ ಮಾದಪ್ಪ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, ಅದನ್ನು ಕಾನೂನು ಬಾಹಿರವಾಗಿ ಕಟ್ಟುತ್ತಿದ್ದಾರೆ ಎಂದು ನಗರ ಪಾಲಿಕೆಯವರಿಗೆ ಕುಲಕರ್ಣಿ ದೂರು ನೀಡಿದ್ದರು.

- Advertisement -

ಆದರೆ ನಗರ ಪಾಲಿಕೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ, ನಗರ ಪಾಲಿಕೆ ವಿರುದ್ದವೂ ನ್ಯಾಯಲಯದಲ್ಲಿ ದೂರು ದಾಖಲಿಸಿ ನ್ಯಾಯಾಲಯದಿಂದ ಮಾದಪ್ಪ ಮನೆ ಕಟ್ಟದಂತೆ ತಡೆಯಾಜ್ಞೆ ತಂದಿದ್ದರು. ಈ ವಿರುದ್ದ ಮಾದಪ್ಪ ಹೈಕೋರ್ಟ್‌ ಮೊರೆ ಹೋಗಿ ಒಂದು ವೇಳೆ ನನ್ನ ವಿರುದ್ದ ಆದೇಶವಾದರೆ ಮನೆಯನ್ನು ಒಡೆಯುತ್ತೇನೆ ಎಂದು ನನ್ನ ಮಾವನಿಗೆ ಹೇಳಿದ್ದರು ಎಂದು ಸಂಜಯ್‌ ದೂರಿನಲ್ಲಿ ಹೇಳಿದ್ದಾರೆ. ಹಾಗೆಯೇ ಕೊಲೆಯಾದ ಅವರು ನಮಗೆ ವಿಡಿಯೋ ಕಾಲ್‌ ಮಾಡಿದಾಗ, ಮಾದಪ್ಪ ಕೊಲೆ ಬೆದರಿಕೆ ಹಾಕಿತ್ತಿರುವ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿದ್ದರು. ಈ ಬೆದರಿಕೆ ವಿಚಾರವಾಗಿ ಅವರು ಈಗಾಗಲೇ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಸಂಜಯ್‌ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಕುರಿತು ನವೆಂಬರ್‌ 5ರಂದು ತನಿಖೆ ಆರಂಭಿಸಿದ್ದ ಜಯಲಕ್ಷ್ಮೀ ಪುರಂನ ಪೊಲೀಸರು, ಕ್ಯಾಂಪಾಸ್‌ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಇದೊಂದು ಕೊಲೆ ಎಂದು ಶಂಕಿಸಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿ,ಸಾವಿನ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ.


ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆ ಮಾಡಿರುವ ಹಿಂದಿನ ರಹಸ್ಯ ತಿಳಿದು ಬಂದಿದೆ. ಮಾದಪ್ಪನ ಪುತ್ರ ಮನು(30) ಮತ್ತು ಅವನ ಸ್ನೇಹಿತ ಅರುಣ್‌ ಗೌಡ ಬಂಧಿತ ಆರೋಪಿಗಳಾಗಿದ್ದಾರೆ.

ನವೆಂಬರ್‌ 4ರಂದು ಸಂಜೆ ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಾಸ್‌ನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ರಸ್ತೆಯಲ್ಲಿ ಕುಲಕರ್ಣಿಯವರು ವಾಯುವಿಹಾರ ನಡೆಸುತ್ತಿದ್ದಾಗ ಅವರಿಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಕುಲಕರ್ಣಿಯವರು ಮೃತಪಟ್ಟಿದ್ದು, ಅಪಘಾತದ ರೀತಿಯಲ್ಲಿಯೇ ಅವರನ್ನು ಕೊಲೆ ಮಾಡಲಾಗಿದೆ ಎಂಬುವುದು ವಿಚಾರಣೆಯಲ್ಲಿ ಸ್ಪಷ್ಟವಾಗಿದೆ.ಕಾರು ಅಪಘಾತ ನಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧ ಪಟ್ಟವರನ್ನು ಬಂಧಿಸಿದ್ದಾರೆ.



Join Whatsapp