ರಾಮೇಶ್ವರಕ್ಕೆ ಹೊರಟ ಟ್ರ್ಯಾಕ್ಸ್ ಕೂಡ್ಲಿಗಿ ಬಳಿ ಅಪಘಾತ; ಐವರ ಸಾವು

Prasthutha|

ಬಳ್ಳಾರಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ  ಟ್ರ್ಯಾಕ್ಸ್ ನ  ಆಕ್ಸಲ್ ಕಟ್ ಆಗಿ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗಿನ ಜಾವ ನಡೆದಿದೆ.

- Advertisement -

ಮೃತರನ್ನು ಚಾಲಕ ಸಿದ್ದಯ್ಯ ಕಾಳಗಿ (48), ಕಲ್ಲವ್ವ (60), ಕುಂತವ್ವ (50), ನೀಲಮ್ಮ (54) ಮತ್ತು ಲಕ್ಷ್ಮೀಬಾಯಿ (60) ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ವಿಜಯಪುರ ಜಿಲ್ಲೆಯ ನಿಡಗುಂಡಿ ಗ್ರಾಮದವರು. ಇವರು ತಮ್ಮ  ಗ್ರಾಮದ ಸುತ್ತಮುತ್ತಲಿನ ಜನರು ಸೇರಿಕೊಂಡು  ರಾಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದರು.

- Advertisement -

 ಟ್ರಾಕ್ಸ್ನ ಆಕ್ಸಲ್ ಕಟ್ ಆಗಿ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

 ಈ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp